ಸಾಲಗಾಂವ ಜಾತ್ರೆಯಲ್ಲಿ ತನ್ನ ಪತ್ನಿ ಹಿಂದೆ ಹಿಂದೆ ಯಾಕೆ ಬರುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಕ್ಕೆ ಪತಿಯ ಮೇಲೆ ಹಲ್ಲೆ..!

Spread the love

ಮುಂಡಗೋಡ : ಸಾಲಗಾಂವ ಜಾತ್ರೆಯಲ್ಲಿ ತನ್ನ ಪತ್ನಿಯ ಹಿಂದೆ ಹಿಂದೆ ಯಾಕೆ ಬರುತ್ತಿದ್ದೀರಿ? ಎಂದು ಪತಿ ಪ್ರಶ್ನಿಸಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ ಘಟನೆ ದಿ.15ರ ಸಂಜೆ ನಡೆದಿದೆ.

ದಿ.15ರ ಸಂಜೆ ಸಾಲಗಾಂವ ಜಾತ್ರೆಯಲ್ಲಿ ತನ್ನ ಪತ್ನಿಯ ಹಿಂದೆ ಹಿಂದೆ ಬಂದವರಿಗೆ ಏಕೆ ಹೀಗೆ ಮಾಡುತ್ತಿದ್ದೀರಿ? ಹಿಂದೆ ಹಿಂದೆ ಯಾಕೆ ಬರುತ್ತಿದ್ದೀರಿ? ಎಂದು ಅಂದಲಗಿಯ ಶರಣ ಕೊಣ್ಣೂರ ಕೇಳಿದ್ದಕ್ಕೆ ಆಪಾದಿತರ ಪೈಕಿ ಮುಂಡಗೋಡದ ವಿನಾಯಕ ಭೋವಿ ಈತನು ಶರಣ ಕೊಣ್ಣೂರನಿಗೆ ಇದು ನಿಮ್ಮಪ್ಪನ ಜಾತ್ರೆಯೇನಲೇ ಅಂತ ಹೇಳಿದವನೇ ಕುತ್ತಿಗೆ ಹಿಡಿದ ದೂಡಿ ಹಾಕಿ ಕೈಯಿಂದ ಹೊಡೆದು ಗಾಯಗೊಳಿಸಿದನು.
ಬಿಡಿಸಲು ಬಂದ ಶರಣ ಕೊಣ್ಣೂರ ಅವರ ತಮ್ಮನಾದ ನಾಗರಾಜನಿಗೂ ಕೈಯಿಂದ ಹೊಡೆದು ಕಾಲಿನಿಂದ ಒದ್ದು, ಆತನ ಎಡಭಾಗದ ಕಿವಿಯನ್ನು ಬಲವಾಗಿ ಕಚ್ಚಿ ಭಾರೀ ರಕ್ತ ಗಾಯಪಡಿಸಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಶರಣ ಕೊಣ್ಣೂರ ತಿಳಿಸಿದ್ದಾರೆ.
ಗಲಾಟೆಯಲ್ಲಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.