ಶಾಂತವಾದ ಚಿಗಳ್ಳಿಯ ಮೂರು ಪವಾಡ ದೀಪಗಳು : ಟ್ರಸ್ಟನವರು ಏನು ಹೇಳುತ್ತಾರೆ ಗೊತ್ತಾ..?

Spread the love

ಮುಂಡಗೋಡ : ಚಿಗಳ್ಳಿಯ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ಮೂರು ಪವಾಡ ದೀಪಗಳು ಶಾಂತವಾದ ಬಗ್ಗೆ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ. ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆಯ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ. 

ಚಿಗಳ್ಳಿ ಗ್ರಾಮದಲ್ಲಿರುವ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತಿರುವ ವೆಂಕಟೇಶ ಅವರು ಕಳೆದ ತಿಂಗಳು ಜನವರಿ 23ರಂದು ನಿಧನರಾಗಿದ್ದಾರೆ. ತದನಂತರ ಅವರ ಸಂಸ್ಕಾರ ಕಾರ್ಯವನ್ನು ಗೋಕರ್ಣದಲ್ಲಿ ಮಾಡಿಕೊಂಡು ಊರಿಗೆ ಬಂದು ವೈಕುಂಠ ಸಮಾರಂಭ ಸಮಾರಾಧನೆಯನ್ನು ಮುಗಿಸಿಕೊಂಡು ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ತೆರೆದಾಗ ದೀಪಗಳು ಶಾಂತವಾಗಿದ್ದು ಕಂಡುಬಂದಿರುತ್ತದೆ. ಈ ಹಿಂದಿನ ಬಗ್ಗೆ ವಿಚಾರ ಮಾಡಬೇಕಾಗಿದ್ದು ಇರುತ್ತದೆ. ಈ ದೀಪಗಳು ಸುಮಾರು 45 ವರ್ಷಗಳಿಂದಲೂ ನಿರಂತರವಾಗಿ ಉರಿಯುತ್ತಿದ್ದು ಭಕ್ತರಿಗೆ ದರ್ಶನವನ್ನು ನೀಡು ನೀಡುತ್ತಾ ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿರುತ್ತದೆ. ಈಗ ಏಕಾಏಕಿ ದೀಪಗಳು ಶಾಂತವಾಗಿದ್ದು ಮುಂದಿನ ಪವಾಡವನ್ನು ನಿರೀಕ್ಷಿಸಬೇಕಾಗಿದೆ.  

ಹೋಮ, ಅವನಾದಿಗಳನ್ನು ಹಾಗೂ ಗ್ರಾಮಸ್ಥರ ವತಿಯಿಂದ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಸ್ಥಳದಲ್ಲಿ ಈಶ್ವರ, ಬಸವಣ್ಣ, ಮಹಾಗಣಪತಿ, ಜ್ಞಾನೇಶ್ವರಿ, ಐದು ತಲೆ ನಾಗನನ್ನು ಹಾಗೂ ದತ್ತಾತ್ರೇಯ ಮತ್ತು ಚೌಡೇಶ್ವರಿ, ಭೂತರಾಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಕ್ರಮ ತೆಗೆದುಕೊಂಡಿದ್ದು ರಾಘವೇಂದ್ರ ಗುಡಿಗಾರ ಶಿವಮೊಗ್ಗ ಶಿಲೆಗಳನ್ನು  ರೂಪಿಸಲೂ ಮುಂಗಡ ನೀಡಲಾಗಿದ್ದು ಇರುತ್ತದೆ. ಈ ಸ್ಥಳವು ಸಿದ್ದಿ ಸ್ಥಳವಾಗಿದ್ದು ನಿಮಿತ್ತ ದೇವಸ್ಥಾನವು ನಿರ್ಮಾಣವಾಗುವುದರಲ್ಲಿ ಸಂದೇಹವಿರುವುದಿಲ್ಲ ಎಂದು ಚಿಗಳ್ಳಿಯ
ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ. ತಿಳಿಸಿದ್ದಾರೆ.