ಟಿಬೆಟಿಕಾಲೋನಿಯಲ್ಲಿ ಎರಡು ಹಣ್ಣಿನ ಅಂಗಡಿಯಲ್ಲಿದ್ದ ಹಣ ಕಳುವು..!

Spread the love

ಮುಂಡಗೋಡ : ಮುಂಡಗೋಡ ಟಿಬೆಟಿಕಾಲೋನಿಯ ಎರಡು ಹಣ್ಣಿನ ಅಂಗಡಿಯಲ್ಲಿದ್ದ ನಗದು ಹಣವನ್ನು ಕಳ್ಳರು ಕಳುವು ಮಾಡಿಕೊಂಡು ಹೋದ ಘಟನೆ ನಡೆದಿದೆ.

ಟಿಬೆಟಿಕಾಲೋನಿಯ ಕ್ಯಾಂಪ್ ನಂಬರ್ 1ರ ಬಾಷಾಸಾಬ್ ರಾಜೇಸಾಬ್ ಜಾತಗಾರ ಅವರ ಹಣ್ಣಿನ ಅಂಗಡಿಯಲ್ಲಿದ್ದ 13ಸಾವಿರರೂ. ಹಾಗೂ ಕ್ಯಾಂಪ್ ನಂಬರ 6ರ ದೇವಕ್ಕಾ ದೇಸಾಯಿ ಅವರ ಹಣ್ಣಿನ ಅಂಗಡಿಯ ಬೀಗ ಮುರಿದು 13ಸಾವಿರರೂ. ನಗದು ಹಣವನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಹಜರೆಸಾಬ ಜಾತಗಾರ ತಿಳಿಸಿದ್ದಾರೆ.