
ಬೆಂಗಳೂರು : ನಾಳೆಯಿಂದ ಬೆಂಗಳೂರಿನ ಯಲಹಂಕದ ಬಳಿ ಏರ್ ಶೋ ಆರಂಭವಾಗಲಿದ್ದು, ಫೆಬ್ರವರಿ 14ರ ವರೆಗೆ ಈ ಒಂದು ಏರ್ ಶೋ ನಡೆಯಲಿದೆ. ಈಗಾಗಲೇ ಏರ್ ಶೋ ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಡಲಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆಬ್ರವರಿ 12ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 12ರ ವರೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ರಾಜ್ಯ ಪ್ರವಾಸಕ್ಕೆ ಗೊಳ್ಳಲಿದ್ದಾರೆ. ಹಾಗಾಗಿ ಇಂದು ಸಂಜೆ 5 ಗಂಟೆಗೆ ರಾಜನಾಥ್ ಸಿಂಗ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 9:30ಕ್ಕೆ ರಾಜನಾಥ್ ಸಿಂಗ್ ಏರ್ ಶೋ ಉದ್ಘಾಟಿಸಲಿದ್ದಾರೆ. ಫೆಬ್ರವರಿ 12ರವರೆಗೆ ಏರ್ ಶೋ ವಿವಿಧ ಕಾರ್ಯಕ್ರಮಗಳಲ್ಲಿ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.