
ಬೆಂಗಳೂರು: ಎಲ್ಲರೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಇರುವಾಗ ಇಲ್ಲೊಂದು ಮನೆಯಲ್ಲಿ ಶೋಕದ ವಾತಾವರಣ ಉಂಟಾಗಿದೆ. ಹಬ್ಬದ ದಿನದಂದೇ ದುಷ್ಕರ್ಮಿಗಳು ಲಾಂಗು ಝಳಪಿಸಿದ್ದು, ಎರಡು ಜೀವಗಳು ಬಲಿಯಾಗಿವೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಕಾಶಿನಗರದ ಶಾಂತರಾಜು ಹಾಗೂ ಪ್ರೇಮಲತಾ ದಂಪತಿ ಕೊಲೆಯಾದವರು. ಹಾಡಹಗಲೇ ದಾಳಿ ಇಟ್ಟ ದುಷ್ಕರ್ಮಿಗಳು ಈ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಕುಮಾರಸ್ವಾಮಿ ಬಡಾವಣೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಯಾಕೆ ಯಾರು ಈ ಕೃತ್ಯವೆಸಗಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.