
ಮುಂಡಗೋಡ : ತಾಲೂಕಿನ ಅಂದಲಗಿ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವಕ್ಕೆ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಲಾಯಿತು.

ಬಿಇಒ ವಿ.ವಿ.ನಡುವಿನಮನಿ, ಸಾಲಾ ಮುಖ್ಯಾಧ್ಯಾಪಕರಾದ ಮಂಜುನಾಥ ಯಾಜಿ, ಶಿಕ್ಷಕರಾದ ವಿ.ಎಚ್.ಜಾವಳ್ಳಿ, ವಿನಾಯಕ ನಾಯ್ಕ, ಪವಿತ್ರಾ ಕೆ.ಜಿ., ಕುಮಾರ ತಡಕನಹಳ್ಳಿ, ರಿತಿಕಾ ಭಸ್ಮೆ, ವಾಣಿಶ್ರೀ ನಾಗಮ್ಮನವರ್, ಸಂಗಪ್ಪ ಚಿವಡಿ ಮುಂತಾದವರಿದ್ದರು.

ವಿದ್ಯಾರ್ಥಿಗಳಿಗೆ ಹೂ ಗುಚ್ಛ, ಸಿಹಿ ನೀಡಿ, ಹೂಮಳೆಗೆರೆಯುವ ಮೂಲಕ ಸ್ವಾಗತಿಸಲಾಯಿತು.
ನಂತರ ಬಿಇಒ ವಿ.ವಿ.ನಡುವಿನಮನಿ ಅವರು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಬೋಧನೆಯ ಮೂಲಕ ತರಗತಿಗೆ ಚಾಲನೆ ನೀಡಿದರು.