Headlines

ಮೋದಿ ಎಲ್ರಿಗಿಂತ ಟಾಪ್; ಜಾಗತಿಕ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿಗೆ ಫಸ್ಟ್ ರ‍್ಯಾಂಕ್

Spread the love

ನವದೆಹಲಿ : ಅಮೆರಿಕದ ಖ್ಯಾತ ಮಾರ್ನಿಂಗ್ ಕನ್ಸಲ್ಟೆನ್ಸಿ ಪೊಲಿಟಿಕಲ್ ಇಂಟೆಲಿಜೆನ್ಸಿ(The Morning Consult) ನಡೆಸಿದ ಸಮೀಕ್ಷೆ ಪ್ರಧಾನಿ ಮೋದಿ(PM Narendra Modi)ಗೆ ಮತ್ತೊಂದು ಹಿರಿಮೆ ತಂದುಕೊಟ್ಟಿದೆ. ಮಾರ್ನಿಂಗ್ ಕನ್ಸೆಲ್ಟೆನ್ಸಿ ಸಂಸ್ಥೆ, ಜಾಗತಿಕ ನಾಯಕರ ಅನುಮೋದನೆ ಟ್ರಾಕರ್ ರೇಟಿಂಗ್(Approval Rating) ಪರೀಕ್ಷಿಸಿದೆ. ಈ ಪರೀಕ್ಷೆಯಲ್ಲಿ ಮೋದಿಗೆ ಶೇಕಡಾ 70ರಷ್ಟು ಮಂದಿ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಮೀಕ್ಷೆಯಲ್ಲಿ 13 ಜಾಗತಿಕ ನಾಯಕರ ಪೈಕಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶೇ.70ರಷ್ಟು ಅನುಮೋದನೆ ರೇಟಿಂಗ್ ಹೊಂದುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 13 ಜಾಗತಿಕ ನಾಯಕರಲ್ಲಿ(13 Global Leaders) ಅತೀ ಹೆಚ್ಚು ರೇಟಿಂಗ್ ಪಡೆದಿರುವುದು ಪ್ರಧಾನಿ ಮೋದಿಯವರೇ ಆಗಿದ್ದಾರೆ.

ಸೆಪ್ಟೆಂಬರ್​ 2ರಂದು ಅಪ್​ಡೇಟ್ ಮಾಡಿದ ಈ ಸಮೀಕ್ಷೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್​ ಮ್ಯಾನ್ಯುಯೆಲ್ ಲೋಪೆಜ್ ಒಬ್ರಡಾರ್, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜರ್ನಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, ಯುಎಸ್​ ಅಧ್ಯಕ್ಷ ಜೋ ಬಿಡೆನ್ ಅವರಿಗಿಂತ ಮುಂದಿದ್ದಾರೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​ ಮಾರಿಸನ್, ಕೆನಡಾ ಪ್ರಧಾನಿ ಟ್ರುಡೊ, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಬ್ರೆಜಿಲ್ ಅಧ್ಯಕ್ಷ ಜೈರೆ ಬೋಲ್ಸೊನಾರೊ ಮೊದಲಾದವರು ಇದ್ದಾರೆ.

ಕಳೆದ 2 ತಿಂಗಳಲ್ಲಿ ಪ್ರಧಾನಿ ಮೋದಿಯವರು ಅನುಮೋದನೆ ರೇಟಿಂಗ್ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಅವರ ಅಪ್ರೂವಲ್ ರೇಟಿಂಗ್ ಶೇ.66ರಷ್ಟಿತ್ತು.

13 ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ಸ್​ ಇಂತಿದೆ

ನರೇಂದ್ರ ಮೋದಿ- ಶೇ.70
ಲೋಪೆಜ್ ಒಬ್ರಡಾರ್-ಶೇ.64
ಮಾರಿಯೋ ಡ್ರಾಗಿ-ಶೇ.63
ಏಂಜೆಲಾ ಮಾರ್ಕೆಲ್-ಶೇ.52
ಜೋ ಬಿಡೆನ್-ಶೇ.48
ಸ್ಕಾಟ್ ಮಾರಿಸನ್-ಶೇ.48
ಜಸ್ಟಿನ್ ಟ್ರುಡೊ-ಶೇ.45
ಬೋರಿಸ್ ಜಾನ್ಸನ್-ಶೇ.41
ಜೈರ್ ಬೋಲ್ಸೊನಾರೊ-ಶೇ.39
ಮೂನ್ ಜೇ-ಇನ್-ಶೇ.38
ಪೆಡ್ರೊ ಸ್ಯಾಂಚೆ-ಶೇ.35
ಇಮ್ಯಾನ್ಯುಯಲ್ ಮ್ಯಾಕ್ರನ್-ಶೇ.34
ಯೋಶಿಹಿದೆ ಸುಗಾ-ಶೇ.25

ಮೋದಿಯವರ ಅಸಮ್ಮತಿ ರೇಟಿಂಗ್ ಕೂಡ ಈಗ ಶೇ.25ಕ್ಕೆ ಇಳಿದಿದೆ. ಇದು ಪಟ್ಟಿಯಲ್ಲಿ ಅತ್ಯಂತ ಕಡಿಮೆ ರೇಟಿಂಗ್ ಆಗಿದೆ.

ಮಾರ್ನಿಂಗ್ ಕನ್ಸಲ್ಟ್​ ನಕ್ಷೆಯಲ್ಲಿ, ಕೊರೋನಾ ಎರಡನೇ ಅಲೆ ಭಾರತಕ್ಕೆ ತೀವ್ರವಾಗಿ ಅಪ್ಪಳಿಸಿದಾಗ, ಮೇ ತಿಂಗಳಲ್ಲಿ ಪ್ರಧಾನಿ ಮೋದಿಯವರ ಅಸಮ್ಮತಿ ರೇಟಿಂಗ್ ಉತ್ತುಂಗಕ್ಕೇರಿತ್ತು. ಈಗ ಕೊರೋನಾ 3ನೇ ಅಲೆಯ ಭೀತಿಯಿದ್ದರೂ ಸಹ ದೇಶದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಇದರೊಂದಿಗೆ ಮೋದಿಯವರ ಅಸಮ್ಮತಿ ರೇಟಿಂಗ್ ಕೂಡ ಕಡಿಮೆಯಾಗಿದೆ.

ಭಾರತದಲ್ಲಿ ಕೊರೋನಾ ಸೋಂಕು ಹರಡಲು ಶುರುವಾದ ಬಳಿಕ, ಮೇ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅನುಮೋದನೆ ರೇಟಿಂಗ್ ಶೇ.84ರಷ್ಟಿತ್ತು. ಆಗಲೂ ಮೋದಿಯವರೇ ಉತ್ತುಂಗ ಸ್ಥಾನದಲ್ಲಿದ್ದರು.

ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಾಯಕರ ಜಾಗತಿಕ ಅನೋದನೆ ಟ್ರಾಕರ್ ರೇಟಿಂಗ್ ಪರೀಕ್ಷಿಸಿದೆ. ಪ್ರತಿ ದಿನ 11,000 ವಯಸ್ಕರನ್ನು ಸಂದರ್ಶಿಸಿ ಮಾಹಿತಿ ಕಲೆಹಾಕಿದೆ. ಬಳಿಕ ವರದಿ ಪ್ರಕಟಿಸಿದೆ.