
ನವದೆಹಲಿ : ತಾಲಿಬಾನ್ ಉಗ್ರರಿಗೆ ಸರ್ಕಾರ ರಚನೆ ಮಾಡೊದಕ್ಕೆ ಎಲ್ಲಾ ಸಹಾಯ ಮಾಡುತ್ತಂತೆ ‘ಭಿಕಾರಿ’ ಪಾಕಿಸ್ತಾನ…..!
ತಾಲಿಬಾನಿಗಳು ಸಂಪೂರ್ಣವಾಗಿ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ನಂತರ ಅವರ ಅಸಲಿ ರೂಪ ಒಂದೊಂದಾಗಿಯೇ ಬಯಲಾಗ್ತಿದೆ.. ಮಹಿಳೆಯರಿಗೆ ಗೌರವಿಸುತ್ತೇವೆ ಅವರ ಹಕ್ಕು ಕಾಪಾಡುತ್ತೇವೆ ಎಂದವರು ಮಹಿಳೆಯರ ಹಕ್ಕುಗಳನ್ನ ಒಂದೊಂದಾಗಿಯೇ ಕಿತ್ತುಕೊಂಡು ಬಂದಿದ್ದಾರೆ. ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ..
ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅಷ್ಟೇ ಅಲ್ಲ ತಾಲಿಬಾನಿಗಳ ಸಹಾಯದಿಂದ ಕಾಶ್ಮೀರ ಕಿತ್ತುಕೊಳ್ಳುವ ಬಗ್ಗೆ ಪಾಕಿಸ್ತಾನ ತಿರುಕನ ಕನಸು ಕಾಣ್ತಿದೆ. ಇದೀಗ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೆ ಸಕಲ ರೀತಿಯಲ್ಲಿ ಸಹಾಯ ಮಾಡೋದಕ್ಕೆ ಮುಂದಾಗಿದೆ ಪಾಪಿಗಳ ನಾಡು ಪಾಕಿಸತಾನ. ಪಾಕಿಸ್ತಾನ ತಾಲಿಬಾನ್‌ಗಳಿಗೆ ಸಹಾಯ ಮಾಡುತ್ತದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಹೇಳಿದ್ದಾರೆ.
ಇನ್ನೂ ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನ ಹೋರಾಡುತ್ತಲೇ ಇರುತ್ತದೆ. ಜೊತೆಗೆ, ಅಂತರ್ಗತ ಆಡಳಿತದ ರಚನೆಗೆ ಸಹಾಯ ಮಾಡುತ್ತದೆ ಎಂದು ಜನರಲ್ ಬಾಜ್ವಾ ಸಭೆಯಲ್ಲಿ ಹೇಳಿದ್ದಾಗೆ ವರದಿಯಾಗಿದೆ. ಆಗಸ್ಟ್ 15ರಂದು ಕಾಬೂಲ್ ಅನ್ನು ವಶಪಡಿಸಿಕೊಂಡ ಬಳಿಕ, ತಾಲಿಬಾನ್ ಸರ್ಕಾರ ರಚನೆ ಘೋಷಣೆ ಮುಂದೂಡುತ್ತಿರುವುದು ಇದು ಎರಡನೇ ಬಾರಿಯಾಗಿದೆ.