ಇಂದೂರಜಿ.ಪಂ.ಕ್ಷೇತ್ರದಲ್ಲಿ ರವಿಗೌಡ ಪಾಟೀಲ, ಕೆಂಜೋಡಿ ಗಲಬಿ ಹವಾ…..

Spread the love

ಮುಂಡಗೋಡ : ಇಂದೂರ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಈಗ ರವಿಗೌಡ ಪಾಟೀಲ ಮತ್ತು ಕೆಂಜೋಡಿ ಗಲಬಿ ಅವರದ್ದೇ ದೊಡ್ಡ ಹವಾ…..

ಜಿ.ಪಂ. ಕ್ಷೇತ್ರದ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಮುಂಡಗೋಡ ತಾಲೂಕಿನಲ್ಲಿ ಮೂರು ಜಿ.ಪಂ. ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಬಿಜೆಪಿ ಮತ್ತು ಕಾಂಗ್ರೆಸ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಮಾತ್ರ ಹೆಚ್ಚಾಗುತ್ತಿದ್ದಾರೆ.

ಮುಂಡಗೋಡ ತಾಲೂಕಿನ ಮಟ್ಟಿಗೆ ಜಿ.ಪಂ. ಚುನಾವಣೆಗೆ ಹೈವೋಲ್ಟೇಜ್ ಕ್ಷೇತ್ರವೆಂದರೆ ಅದು ಇಂದೂರ ಜಿಲ್ಲಾ ಪಂಚಾಯತ ಕ್ಷೇತ್ರ.

ಈಗಾಗಲೇ ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಬಿ.ಜೆ.ಪಿ.ಯಲ್ಲಿ ಟಿಕೆಟಗಾಗಿ ಬಹಳಷ್ಟು ಜನರು ಕಸರತ್ತು ಈಗಲೇ ಆರಂಭಿಸಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಅಲ್ಪಮತಗಳಿಂದ ಸೋತಿರುವ ಸಿದ್ದು ಹಡಪದ ಬಿಜೆಪಿ ಟಿಕೆಟ್ ಪಡೆಯಲು ಜಿದ್ದಿಗೆ ಬಿದ್ದಿದ್ದಾರೆ.

ಇಂದೂರ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಸದ್ಯ ಮತದಾರರ ಒಲವು ಇರುವ ಮೊದಲನೇ ಹೆಸರೇ ರವಿಗೌಡ ಪಾಟೀಲರದ್ದು. ನಂತರ ಕೆಂಜೋಡಿ ಗಲಬಿ ಅವರದ್ದಾಗಿದೆ. ಮಾಜಿ ಜಿ.ಪಂ. ಸದಸ್ಯರಾಗಿರುವ ರವಿಗೌಡ ಪಾಟೀಲರು ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳಿಂದಾಗಿ ಮತದಾರರು ಅವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಇಂದೂರ ಕ್ಷೇತ್ರದ ಕುಂದರಗಿ, ನ್ಯಾಸರ್ಗಿ, ಬಾಚಣಕಿ, ಮಜ್ಜಿಗೇರಿ, ಮಜ್ಜಿಗೇರಿ ಗೌಳಿದಡ್ಡಿ, ಅರಶಿಣಗೇರಿ, ಅತ್ತಿವೇರಿ, ಅತ್ತಿಏರಿ ಗೌಳಿದಡ್ಡಿ, ಹುನಗುಂದ, ಅಗಡಿ, ಸೇಲಂನಗರ, ಬಸಾಪುರ, ಹುಲಿಹೊಂಡ, ನಂದಿಕಟ್ಟಾ, ಕೆಂದಲಗೇರಿ, ಯರೇಬೈಲ್, ಬಸನಾಳ, ಕೊಪ್ಪ, ಇಂದೂರನ ಮತದಾರರು ರವಿಗೌಡ ಪಾಟೀಲ ಅವರ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ರವಿಗೌಡ ಪಾಟೀಲರ ಹವಾ ಹೆಚ್ಚಾಗಿ ಈ ಭಾಗದಲ್ಲಿ ಕಂಡುಬರುತ್ತಿದೆ.

ಇನ್ನು ಮುಖಂಡರಾದ ಕೆಂಜೋಡಿ ಗಲಬಿ ಅವರ ಬಗ್ಗೆಯೂ ಮತದಾರರಿಗೆ ಉತ್ತಮ ಅಭಿಪ್ರಾಯವಿದೆ.

ಇಂದೂರ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ 2ನೇ ಹವಾ ಹೆಚ್ಚಾಗಿರುವುದು ಕೆಂಜೋಡಿ ಗಲಬಿಯವರದ್ದಾಗಿದೆ.