ಸುರತ್ಕಲ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ, ಐವರ ಬಂಧನ

Spread the love

ಮಂಗಳೂರು: ಪೊಲೀಸ್‌ ಅಧಿಕಾರಿಯೊಬ್ಬರ ಸಮಕ್ಷಮವೇ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ನಗರದ ಎನ್‌ಐಟಿಕೆ ಸುರತ್ಕಲ್‌ ಟೋಲ್‌ಗೇಟ್‌ ಬಳಿ ಭಾನುವಾರ ಸಂಜೆ ಬೊಲೆರೋ ವಾಹನದಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಹಲವು ಯುವಕರು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದರು. ಈ ವಾಹನದ ಹಿಂದೆಯೇ ನಗರದ ಸಂಚಾರಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೂಡ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಹಿಂದು ಸಂಘಟನೆ ಯುವಕರು ಬೊಲೆರೋ ಅಡ್ಡಗಟ್ಟಿದಾಗ ಹಲ್ಲೆ ತಡೆಯಲು ಅಧಿಕಾರಿ ಯತ್ನಿಸಿದ್ದ ವಿಡಿಯೋ ವೈರಲ್‌ ಆಗಿತ್ತು.

ವಿಡಿಯೋ ವೈರಲ್ ಬೆನ್ನಲ್ಲೇ ಐವರು ಯುವಕರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆಯ ಕಾಲೇಜೊಂದರ ವಿದ್ಯಾರ್ಥಿನಿಯರು ಅನ್ಯಕೋಮಿನ ವಿದ್ಯಾರ್ಥಿಗಳೊಂದಿಗೆ ತಿರುಗಾಡುತ್ತಿದ್ದ ಅನುಮಾನದ ಮೇಲೆ ಈ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ವಾಹನದಲ್ಲಿ ಹಿಂದು ಹುಡುಗಿಯರಿಲ್ಲದಿದ್ದರೂ ತಪ್ಪು ಮಾಹಿತಿ ಮೇಲೆ ವಾಹನದ ಮೇಲೆ ದಾಳಿ ನಡೆಸಿರುವುದಾಗಿಯೂ ಹೇಳಲಾಗಿದೆ.