
ಮುಂಡಗೋಡ :ಈ ಭಾಗದ ಸರ್ವಾಂಗೀಣ ಪ್ರಗತಿ ಮಾಡುವುದೇ ನನ್ನ ಮೂಲಭೂತ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಇಂದು ಅವರು ಗುಂಜಾವತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ ಕಸ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಡಗೋಡನ್ನು 25 ವರ್ಷ ಆಳಿದವರು ಮುಂಡಗೋಡ ತಾಲೂಕಿಗೆ ಎಷ್ಟು ನೀರಾವರಿ ಯೋಜನೆ ತಂದು ಕೊಟ್ಟಿದ್ದಾರೆ? ಎಂದು ಸಚಿವ ಶಿವರಾಮ ಹೆಬ್ಬಾರ ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ಸಚಿವ ಹೆಬ್ಬಾರ ಅವರು ಕಸ ವಿಲೇವಾರಿ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ, ಗ್ರಾಮಸ್ಥರಿಗೆ ಕಸ ವಿಲೇವಾರಿ ಪರಿಕರಗಳನ್ನು ವಿತರಿಸಿದರು.

ನಂತರ ಉಗ್ಗಿನಕೇರಿ ಗ್ರಾಮದಲ್ಲಿ ಜಲ ಜೀವನ ಮಷಿನ್ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆಯನ್ನು ಸಚಿವ ಶಿವರಾಮ ಹೆಬ್ಬಾರ ನೆರವೇರಿಸಿ ಮಾತನಾಡಿದರು.
ಈ ಸಂದರ್ದಲ್ಲಿ ಯುವ ನಾಯಕ ವಿವೇಕ ಹೆಬ್ಬಾರ, ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ, ಮುಖಂಡರಾದ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಉಮೇಶ ಬಿಜಾಪುರ, ಬಸಯ್ಯ ನಡುವಿನಮನಿ ಮುಂತಾದವರಿದ್ದರು.
ಬಡ್ಡಿಗೇರಿಯಲ್ಲಿ ಕಾರ್ಯಕರ್ತರ ಭೇಟಿ :

ಬಡ್ಡಿಗೇರಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಸಚಿವ ಶಿವರಾಮ ಹೆಬ್ಬಾರ ಅವರು ಇಂದು ಭೇಟಿಯಾಗಿ ಕೆಲ ಕಾಲ ಪಕ್ಷ ಸಂಘಟನೆ ಹಾಗೂ ಗ್ರಾಮ ಅಭಿವೃದ್ಧಿಯ ಕುರಿತಂತೆ ಚರ್ಚಿಸಿ ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸಿದರು.