ದಾವಣಗೆರೆ: ಕಲ್ಲಿದ್ದಲಿನ ಅಭಾವದಿಂದ ರಾಜ್ಯದಲ್ಲಿನ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪದನೆಯಲ್ಲಿ (power supply) ಕೊರತೆ ಉಂಟಾಗಲಿದೆ ಎನ್ನುವ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಬ್ಬದ ಸಂಭ್ರಮವನ್ನು ಕತ್ತಲೆಯಲ್ಲಿ ಆಚರಣೆ ಮಾಡಬೇಕಾಗುತ್ತದೆ ಎನ್ನಲಾಗಿದೆ.
ಈ ನಡುವೆ ಇಂದು ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಇಂದನ ಸಚಿವ ವಿ. ಸುನೀಲ್ ಕುಮಾರ್ (Energy Minister V Sunil Kumar) ಅವರು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಲ್ಲಿದ್ದಲಿನ ಅಭಾವ ಉಂಟಾಗಿಲ್ಲ, ಯಾವುದೇ ಕಾರಣಕ್ಕೂ ವಿದ್ಯುತ್ ಕೊರತೆ (power) ಉಂಟಾಗುವುದಿಲ್ಲ ಅಂತ ಹೇಳಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ನಾವು ನೋಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಉಂಟಾಗಲಿದೆ ಎನ್ನಲಾಗುತ್ತಿರುವ ವಿದ್ಯುತ್ ಅಭಾವದ ಬಗ್ಗೆ ವರದಿಗಳು ಸುಳ್ಳು ಅಂತ ಹೇಳಿದ್ದು, ಕಲ್ಲಿದ್ದಲಿನಿಂದ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ರಾಯಚೂರು-ಬಳ್ಳಾರಿ ಘಟಕದಲ್ಲಿ ವಿದ್ಯುತ್ ಉತ್ಪದನೆಯಾಗುವುದಕ್ಕೆ ಯಾವುದೇ ತೊಂದ್ರೆ ಇಲ್ಲ ಅಂತ ಅವರು ಇದೇ ವೇಳೇ ಹೇಳಿದರು.
ಇದಲ್ಲದೇ ಅವರು ಇದೇ ವೇಳೆ ಕೇಂದ್ರ ಸರ್ಕಾರ 8 ರೇಕ್ಸ್ ಕಲ್ಲಿದ್ದಲನ್ನು ಕಳುಹಿಸಿ ಕೊಟ್ಟಿದೆ ಅಂತ ಹೇಳಿದರು. ಇದಲ್ಲದೇ ಮುಂದಿನ ತಿಂಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಲ್ಲಿದ್ದಲನ್ನು ರೇಕ್ಸ್ ಅನ್ನುಕಳುಹಿಸಿಕೊಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಅಂತ ಹೇಳಿದರು. ಇನ್ನೂ ಉಪಚುನಾವಣೆಯಲ್ಲಿ ನಾವೇ ಗೆಲ್ಲೋದು ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಾವು ಈ ಬಾರಿಯ ಚುನಾವಣೆಯನ್ನು ಗೆದ್ದೆ ಗೆಲ್ಲುತ್ತೇವೆ ಅಂತ ಹೇಳಿದರು.