ಮುಂಡಗೋಡ : ಕನಕದಾಸರು ನಮಗೆ ಆದರ್ಶಪ್ರಾಯರು ಎಂದು ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಗಂಗಾಧರ ನಾಯ್ಕ ಹೇಳಿದರು.
ಇಂದು ಅವರು ತಾಲೂಕಾಡಳಿತ, ತಾ.ಪಂ., ಪ.ಪಂ. ಆಶ್ರಯದಲ್ಲಿ ಮಿನಿವಿಧಾನಸೌಧದಲ್ಲಿ ನಡೆದ ಭಕ್ತ ಶ್ರೇಷ್ಟ ಶ್ರೀಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಜಾತಿ ಸಂಘರ್ಷ ನಡೆದಾಗಲ್ಲೆಲ್ಲಾ ನಮಗೆ ಭಕ್ತ ಕನಕದಾಸರು ನೆನಪಾಗುತ್ತಾರೆ ಎಂದು ಅವರು ಹೆಳಿದರು.
ತಹಶೀಲದಾರ ಶ್ರೀಧರ ಮುಂದಲಮನಿ ಮಾತನಾಡುತ್ತಾ, ಕನಕದಾಸರು ಭಕ್ತ ಶ್ರೇಷ್ಟರಾಗಿದ್ದರು. ಸಮಾಜದ ಮೌಢ್ಯಗಳನ್ನು ಹೋಗಲಾಡಿಸಲು ಹೋರಾಡಿದರು. ಸಂಕುಚಿತ ಮನೋಭಾವವನ್ನು ನಾವು ಬಿಟ್ಟು ಬಿಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ, ಆರ್.ಎಫ್.ಒ. ಸುರೇಶ ಕುಲ್ಲೊಳ್ಳಿ ಇದ್ದರು. ಗ್ರೇಡ್-2 ತಹಸೀಲದಾರ ಜಿ.ಬಿ.ಭಟ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ತಹಶೀಲದಾರ ಶ್ರೀಧರ ಮುಂದಲಮನಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಜೆ ಸಲ್ಲಿಸಿದರು. ಸಮಾಜದ ಮುಖಂಡರು, ಗಣ್ಯರು ಕನಕದಾಸರಿಗೆ ಪುಷ್ಪ ನಮನ ಸಲ್ಲಿಸಿದರು.
ಸಚಿವರಿಂದ ಪುಷ್ಪ ನಮನ…..
ಹೆಸ್ಕಾಂ ಕಚೇರಿ ಎದುರಿಗಿರುವ ಕನಕದಾಸರ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್.ಪಾಟೀಲ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕಾ ಹಾಲುಮತ ಕುರುಬ ಸಮಾಜದ ಅಧ್ಯಕ್ಷರಾದ ಜಗದೀಶ ಕುರುಬರ, ಸಮುದಾಯದ ಮುಖಂಡರಾದ ನಿಂಗಪ್ಪ ಕುರುಬರ, ರಾಜು ಗುಬ್ಬಕ್ಕನವರ್, ಪ್ರಕಾಶ ಹುದ್ಲಮನಿ, ಬಸವರಾಜ ಟಣಕೆದಾರ, ಪೀರಜ್ಜ ಸಾಗರ, ಶಿವಾನಂದ ಕುರುಬರ, ಗುಡದಯ್ಯ ಕಳಸಗೇರಿ, ಎಸ್.ಎಸ್.ಪಾಟೀಲ, ಶಿವಾನಂದ ದೊಡ್ಮನಿ, ಪಟ್ಟಣ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಹರಮಲಕರ, ಎಲ್.ಎಸ್.ಎಂ.ಪಿ. ಸೊಸೈಟಿ ಅಧ್ಯಕ್ಷ ಉಮೇಶ ಬಿಜಾಪುರ, ವಕೀಲರಾದ ಗುಡ್ಡಪ್ಪ ಕಾತೂರ ಮುಂತಾದವರಿದ್ದರು.
ಶಿಕ್ಷಕ ಪ್ರಕಾಶ ಕೊಡದ ನಿಧನ…..
ಮುಂಡಗೋಡ : ತಾಲೂಕಿನ ತಮ್ಯಾನಕೊಪ್ಪ ಸರಕಾರಿ ಪ್ರಾ.ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ ಕೊಡದ(52) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಿಕ್ಷಕ ಪ್ರಕಾಶ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಮುಂಡಗೋಡ ತಾಲೂಕಿನಲ್ಲಿ 1997ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಮಾಪುರ ಹಾಗೂ ತಮ್ಯಾನಕೊಪ್ಪ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಶಿಕ್ಷಕ ಪ್ರಕಾಶ ಅವರ ನಿಧನಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸುಭಾಸ ಡೋರಿ ಹಾಗೂ ಅಧ್ಯಕ್ಷರಾದ ದಯಾನಂದ ನಾಯ್ಕ ಮತ್ತು ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.