
ಮುಂಡಗೋಡ : ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡ ಪರಿಣಾಮ ನೂರಾರು ಶುಂಠಿ ಬೆಳೆಗಾರರು ಲಕ್ಷಾಂತರರೂ. ಹಾನಿ ಅನುಭವಿಸುವಂತಹ ಪರಿಸ್ಥಿತಿ ಬಂದೊದಗಿದೆ.

ಆರಂಭದಲ್ಲಿ ಶುಂಠಿ ಬೆಳೆದ ರೈತರು ಪುಣೆ, ಮುಂಬಯಿ, ತಮಿಳುನಾಡು, ಕೇರಳ ಮಾರುಕಟ್ಟೆಗೆ ಶುಂಠಿ ಕಳಿಸಿ ಲಕ್ಷಗಟ್ಟಲೇ ಹಣ ಸಂಪಾದಿಸಿದರು.
ಆದರೆ ಕಳೆದ ಎರಡು ವರ್ಷಗಳಿಂದ ಶುಂಠಿ ಬೆಳೆಗಾರರು ಹಾನಿ ಅನುಭವಿಸುತ್ತಿದ್ದು ಈ ವರ್ಷ ಮುಂಡಗೋಡ ತಾಲೂಕಿನಲ್ಲಿ 400ಕ್ಕೂ ಅಧಿಕ ರೈತರು 360 ಹೆಕ್ಟೇರ ಪ್ರದೇಶದಲ್ಲಿ ಶುಂಠಿ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ.

ಈ ವರ್ಷ ಸತತವಾಗಿ ಸುರಿದ ಮಳೆಗೆ ಗದ್ದೆಗಳಲ್ಲಿ ಹೆಚ್ಚಿನ ತೇವಾಂಶವುಂಟಾಗಿ ಶುಂಠಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿತು.

ಈ ರೋಗ ಹತೋಟಿಗೆ ತರಲು ರೈತರು ಹಲವಾರು ಬಗೆಯ ಔಷಧ ಸಿಂಪಡಿಸಿ ಸತತವಾಗಿ ಪ್ರಯತ್ನಿಸಿದರೂ ನಿರಂತರ ಮಳೆಯಿಂದ ಕೊಳೆರೋಗ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಇದರಿಂದ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಮಾರುಕಟ್ಟೆಯಲ್ಲಿ ದರವೂ ಕುಸಿದಿದ್ದು ಇದರಿಂದ ಬೆಳೆಗಾರರು ಲಕ್ಷಾಂತರರೂ. ಹಾನಿ ಅನುಭವಿಸುವಂತಾಗಿದೆ.
ಕಳ್ಳತನ : ಅರುಣಾಚಲ ಪ್ರದೇಶದ ವ್ಯಕ್ತಿ ಬಂಧನ…..

ಮುಂಡಗೋಡ : ಅರುಣಾಚಲ ಪ್ರದೇಶದ ವ್ಯಕ್ತಿಯನ್ನು ಕಳ್ಳತನ ಆರೋಪದ ಮೇಲೆ ಮುಂಡಗೋಡ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅರುಣಾಚಲ ಪ್ರದೇಶದ ಲೊಬ್ಸಾಂಗ್ ತೆಂಜಿನ್ ಯಾನೆ ತ್ಸಿರಿಂಗ್ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಲೊಬ್ಸಾಂಗ್ ತೆಂಜಿನ್ ಅಗಡಿ ಗ್ರಾಮದ ರೈಸ್ ಮಿಲ್ ಮುಂಭಾಗದಲ್ಲಿರುವ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಜಮನಪ್ಪ ಲಮಾಣಿ ಎಂಬುವರ ಚಹಾ ಹೊಟೇಲಿನ ಹಿಂಬದಿ ಬಾಗಿಲು ಮುರಿದು ನವೆಂಬರ್ 18ರಂದು ರಾತ್ರಿ 5ಸಾವಿರರೂ. ನಗದು ಹಾಗೂ 15ಸಾವಿರರೂ. ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಅರುಣಾಚಲ ಪ್ರದೇಶದ ವ್ಯಕ್ತಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಚಹಾ ಹೊಟೇಲಿನ ಕಳ್ಳತನ, ಟಿಬೆಟಿಕಾಲೋನಿಯಲ್ಲಿಯೂ ಕೂಡ ಎರಡು ಲಕ್ಷರೂ. ಬೆಲೆಬಾಳುವ ಎರಡು ಲ್ಯಾಪಟಾಪ್ ಹಾಗೂಎರಡು ಐಪೋನ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆಂದು ಪೊಲೀಸ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.