ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-12-2021)

Spread the love

ನಿತ್ಯ ನೀತಿ : ಅತಿಯಾದ ರೂಪ ಸೀತೆಗೆ ಮುಳುವಾಯಿತು,
ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು,
ಅತಿಯಾದ ದಾನ ಬಲಿಯನ್ನು ನಾಶ ಮಾಡಿತು,
ಆದುದರಿಂದ ಯಾವುದು ಅತಿಯಾಗಬಾರದು.

-ಚಾಣಾಕ್ಯ

# ಪಂಚಾಂಗ : ಶುಕ್ರವಾರ , 17-12-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ ಪೂರ್ಣ/ ನಕ್ಷತ್ರ: ಕೃತ್ತಿಕಾ / ಮಳೆ ನಕ್ಷತ್ರ: ಜ್ಯೇಷ್ಠ

* ಸೂರ್ಯೋದಯ : ಬೆ.06.35
* ಸೂರ್ಯಾಸ್ತ : 05.57
* ರಾಹುಕಾಲ : 4.30-6.00
* ಯಮಗಂಡ ಕಾಲ : 3.00-4.30
* ಗುಳಿಕ ಕಾಲ : 7.30-9.00

# ಇಂದಿನ ಭವಿಷ್ಯ
ಮೇಷ: ಆರೋಗ್ಯದ ಕಡೆ ಗಮನ ವಹಿಸಿವುದು ಸೂಕ್ತ. ಸಂಸಾರದಲ್ಲಿ ತುಸು ಮನಸ್ಥಾಪ.
ವೃಷಭ: ಕಚೇರಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಸಹೋದರ-ಸಹೋದರಿಯರಲ್ಲಿ ಮುನಿಸು.
ಮಿಥುನ: ಮಿತವಾದ ಖರ್ಚು ಮಾಡುವುದು ಅಗತ್ಯ. ಅತಿಥಿಗಳ ಆಗಮನ.

ಕಟಕ: ವ್ಯಾಪಾರ-ವಹಿವಾಟಿನಲ್ಲಿ ತುಸು ವ್ಯತ್ಯಯ. ಎಚ್ಚರಿಕೆವಹಿಸುವುದು ಸೂಕ್ತ.
ಸಿಂಹ: ಕೋಪ ಕಡಿಮೆ ಮಾಡಿಕೊಳ್ಳವುದು ಒಳಿತು. ಧನಾಗಾಮನ ಆಗುವ ನೀರೀಕ್ಷೆ.
ಕನ್ಯಾ: ಮಕ್ಕಳ ಆರೋಗ್ಯದ ಮೇಲೆ ಜಾಗೃತಿ ವಹಿಸುವುದು ಸೂಕ್ತ.

ತುಲಾ: ಆಸ್ತಿ ವಹಿವಾಟಿನಲ್ಲಿ ಕೊಂಚ ಏರುಪೇರು. ಬಂಧುಗಳಿಂದ ನಿಷ್ಟೂರದ ಮಾತುಗಳು.
ವೃಶ್ಚಿಕ: ಅಡೆತಡೆಗಳ ನಡುವೆಯೂ ಸುಗಮ ಕಾರ್ಯ. ಮಕ್ಕಳಿಂದ ಬೇಸರದ ವಾತಾವರಣ.
ಧನುಸ್ಸು: ಇಷ್ಟಾರ್ಥ ದೇವರ ದರ್ಶನ. ಶುಭ ದಿನ.

ಮಕರ: ಚಿನ್ನಾಭರಣ ಖರೀದಿ ಸಾಧ್ಯತೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಕುಂಭ: ಅನವಶ್ಯಕ ದೂರ ಪ್ರಯಾಣ. ದುಂದು ವೆಚ್ಚ. ವ್ಯಾಪಾರದಲ್ಲಿ ನಷ್ಟ.
ಮೀನ: ಹಣಕಾಸು ವ್ಯವಹಾರದಲ್ಲಿ ಲಾಭ. ಆರೋಗ್ಯದ ಮೇಲೆ ನಿಗಾವಹಿಸುವುದು ಸೂಕ್ತ.