
ಹೊನ್ನಾವರ : ಖಾಸಗಿ ವಿಡಿಯೋವನ್ನು ವೈರಲ್ ಮಾಡಿ ತಮ್ಮ ಮಾನಹಾನಿಗೆ ಕಾರಣನಾಗಿರುವ ಬಿಜೆಪಿ ನಗರ ಘಟಕದ ಅಧ್ಯಕ್ಷನ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಿಜೆಪಿ ನಗರ ಘಟಕದ ಅಧ್ಯಕ್ಷ ಉಮೇಶ್ ಸಾರಂಗ್ ವಿರುದ್ಧ ಮಹಿಳೆ ದೂರು ನೀಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಆಟೋ ಚಾಲಕನಾಗಿರುವ ಉಮೇಶ್ ಸಾರಂಗ್ ಒಮ್ಮೆ ಈ ಮಹಿಳೆ ಆಟೋದಲ್ಲಿ ಪ್ರಯಾಣಿಸುವಾಗ ಸಲುಗೆಯಿಂದ ಮಾತನಾಡಿ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ನಂತರ ಚಾಟಿಂಗ್ ಮೂಲಕ ಸ್ನೇಹವನ್ನು ದುರುಪಯೋಗಪಡಿಸಿಕೊಳ್ಳಲಾರಂಭಿಸಿದ ಇದಕ್ಕಿದ್ದಂತೆ ಸ್ನಾನದ ವಿಡಿಯೋವನ್ನು ಕಳುಹಿಸುವಂತೆ ಬೇಡಿಕೆ ಇಟ್ಟಿದ್ದ.
ಇದನ್ನು ತಿರಸ್ಕರಿಸಿದ್ದಕ್ಕೆ ಗಂಡನಿಗೆ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದ. ಒತ್ತಡಕ್ಕೆ ಮಣಿದು ವಾಟ್ಸಪ್‍ನಲ್ಲಿ ವಿಡಿಯೋ ಕಳುಹಿಸಿದ್ದಾಗಿ ದೂರಿನಲ್ಲಿ ಕಳುಹಿಸಿದ್ದಾರೆ. ಈಗ ಆ ವಿಡಿಯೋವನ್ನು ವೈರಲ್ ಮಾಡಿ ತನ್ನ ಮಾನಹಾನಿಗೆ ಕಾರಣನಾಗಿದ್ದಾನೆ ಎಂದು ದೂರು ನೀಡಿದ್ದಾರೆ.