
ಬೆಂಗಳೂರು: ರಾಜ್ಯದ ನೂತನ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದಂತ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸೋದಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ. ದಿನಾಂಕ 06-01-2022ರಂದು ಬೆಳಿಗ್ಗೆ 11ಕ್ಕೆ ಸಮಯವನ್ನು ನಿಗದಿ ಪಡಿಸಲಾಗಿದೆ.
ಈ ಸಂಬಂಧ ವಿಧಾನ ಪರಿಷತ್ ನ ಉಪ ಕಾರ್ಯದರ್ಶಿ ಬಿಎ ಬಸವರಾಜ ಮಾಹಿತಿ ನೀಡಿದ್ದು, ದಿನಾಂಕ 06-01-2022ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 25 ನೂತನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ.
ನೂತನ ಪರಿಷತ್ ಸದಸ್ಯರು, ಚುನಾವಣಾ ಆಧಿಕಾರಿಯವರು ನೀಡಿರುವ ಪ್ರಮಾಣ ಪತ್ರದೊಂದಿಗೆ ಆಗಮಿಸಿ, ಪ್ರಮಾಣ ವಚನ ಸ್ವೀಕರಿಸುವಂತೆ ಪತ್ರದಲ್ಲಿ ಆಹ್ವಾನಿಸಲಾಗಿದೆ.
ಅಂದಹಾಗೇ, ಡಿಸೆಂಬರ್ 10ರಂದು 25 ಕರ್ನಾಟಕ ವಿಧಾನಪರಿಷತ್ತಿನ (Karnataka Legislative Council) ಸ್ಥಾನಗಳ ಆಯ್ಕೆಗಾಗಿ ಮತದಾನ ನಡೆದಿತ್ತು. ಈ ಮತದಾನದ ಮತಏಣಿಕೆ ಕಾರ್ಯ ಡಿಸೆಂಬರ್ 14ರಂದು ನಡೆದಿತ್ತು. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದರು.
ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
- ಮಂಡ್ಯ ಕ್ಷೇತ್ರ – ದಿನೇಶ್ ಗೂಳಿಗೌಡ ಗೆಲುವು
- ಧಾರವಾಡ – ಗದಗ ಹಾವೇರಿ ಕ್ಷೇತ್ರ – ಸಲೀಂ ಅಹ್ಮದ್ ಗೆಲುವು
- ರಾಯಚೂರು ಕ್ಷೇತ್ರ – ಶರಣಗೌಡ ಪಾಟೀಲ್ ಗೆಲುವು
- ಬೀದರ್ ಕ್ಷೇತ್ರ – ಭೀಮರಾವ್ ಪಾಟೀಲ್ ಗೆಲುವು
- ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಎಸ್ ರವಿ ಗೆಲುವು
- ಮೈಸೂರು-ಚಾಮರಾಜನಗರ ಕ್ಷೇತ್ರ – ಡಾ.ಡಿ.ತಿಮ್ಮಯ್ಯ ಗೆಲುವು
- ಕೋಲಾರ- ಚಿಕ್ಕಬಳ್ಳಾಪುರ ಕ್ಷೇತ್ರ – ಎಂ ಎಲ್ ಅನೀಲ್ ಕುಮಾರ್ ಗೆಲುವು
- ದಕ್ಷಿಣ ಕನ್ನಡ ಉಡುಪಿ ಕ್ಷೇತ್ರ – ಮಂಜುನಾಥ್ ಬಂಢಾರಿ ಗೆಲುವು
- ತುಮಕೂರು ಕ್ಷೇತ್ರ – ರಾಜೇಂದ್ರ ಗೆಲುವು
- ಕೋಲಾರ – ಚಿಕ್ಕಬಳ್ಳಾಪುರ ಕ್ಷೇತ್ರ – ಎಂ ಎಲ್ ಅನೀಲ್ ಕುಮಾರ್ ಗೆಲುವು
ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
- ದಕ್ಷಿಣ ಕನ್ನಡ – ಉಡುಪಿ ಕ್ಷೇತ್ರದಿಂದ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು
- ಧಾರವಾಡ ಗದಗ ಹಾವೇರಿ ಕ್ಷೇತ್ರ – ಪ್ರದೀಶ್ ಶೆಟ್ಟರ್ ಗೆಲುವು
- ಕೊಡಗು ಕ್ಷೇತ್ರ – ಸುಜಾ ಕುಶಾಲಪ್ಪ ಗೆಲುವು
- ಬೆಂಗಳೂರು ನಗರ ಕ್ಷೇತ್ರ – ಹೆಚ್ ಎಸ್ ಗೋಪಿನಾಥ ರೆಡ್ಡಿ ಗೆಲುವು
- ಉತ್ತರ ಕನ್ನಡ ಕ್ಷೇತ್ರ – ಗಣಪತಿ ಉಳ್ವೇಕರ್ ಗೆಲುವು
- ಚಿತ್ರದುರ್ಗ – ದಾವಣಗೆರೆ – ಕೆ ಎಸ್ ನವೀನ್ ಗೆಲುವು
- ವಿಜಯಪುರ -ಬಾಗಲಕೋಟೆ ಕ್ಷೇತ್ರ – ಪಿ ಹೆಚ್ ಪೂಜಾರ್ ಗೆಲುವು
- ಚಿಕ್ಕಮಗಳೂರು ಕ್ಷೇತ್ರ – ಎಂ.ಕೆ.ಪ್ರಾಣೇಶ್
- ಕಲಬುರ್ಗಿ ಕ್ಷೇತ್ರ – ಬಿ.ಜಿ.ಪಾಟೀಲ್ ಗೆಲುವು
- ಬಳ್ಳಾರಿ ಕ್ಷೇತ್ರ – ವೈ ಎಂ ಸತೀಶ್ ಗೆಲುವು
- ಶಿವಮೊಗ್ಗ ಕ್ಷೇತ್ರ – ಡಿಎಸ್ ಅರುಣ್ ಗೆಲುವು
- ಮೈಸೂರು ಕ್ಷೇತ್ರ ಬಾಕಿ
ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
- ಹಾಸನ ಕ್ಷೇತ್ರ – ಸೂರಜ್ ರೇವಣ್ಣ ಗೆಲುವು