
ಬೆಂಗಳೂರು : ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್(B.C Nagesh) ಅವ್ರಿಗೆ ಕೊರೊನಾ ಸೋಂಕು(Corona infection) ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಕ್ವಾರಂಟೈನ್ ಆಗಿದ್ದಾರೆ.
ಈ ಕುರಿತು ಟ್ವಿಟ್ ಮೂಲಕ ಮಾಹಿತಿ ನೀಡಿದ ಸಚಿವರು ‘ಕೋವಿಡ್-19 ಲಘು ಲಕ್ಷಣಗಳು ಕಾಣಿಸಿದ ಕಾರಣ ನಾನು ಇಂದು ಪರೀಕ್ಷೆಗೆ ಒಳಪಟ್ಟಿದ್ದು, ಕೋವಿಡ್-19 ವರದಿ ಪಾಸಿಟಿವ್ ಬಂದಿದೆ.
ಕ್ವಾರಂಟೈನ್‌ನಲ್ಲಿದ್ದು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದಿದ್ದಾರೆ.
ಇನ್ನು ಇಂದು ಮಧ್ಯಾಹ್ನವಷ್ಟೇ ಕೋಲಾರದಲ್ಲಿ ಸಚಿವ ನಾಗೇಶ್ ಮತ್ತು ಅತಿಥಿ ಉಪನ್ಯಾಸಕರ ನಡುವೆ ವಾಗ್ವಾದ ನಡೆದಿತ್ತು. ಕೋಲಾರ ಹೊರ ವಲಯದ ಹೆದ್ದಾರಿಯಲ್ಲಿಯಲ್ಲಿ ತಮ್ಮನ್ನು ಭೇಟಿಯಾಗಿ ಮನವಿ ಅರ್ಪಿಸಲು ಮುಂದಾದ, ಜಿಲ್ಲೆಯ ಅತಿಥಿ ಉಪನ್ಯಾಸಕರು ಈ ವೇಳೆಯಲ್ಲಿ, ಸಚಿವರ ಮುಂದೆ, ನಮಗೆ ವೇತವನ್ನ ಹೆಚ್ಚಳ ಮಾಡಿ, ನಾವು ಶೋಷಣೆಗೆ ಒಳಗಾಗಿದ್ದೇವೆ ಅಂಥ ಹೇಳಿಕೊಂಡರು.
ಮನವಿಯನ್ನ ಕೇಳಿಸಿಕೊಳ್ಳುವ ವೇಳೆಯಲ್ಲಿ ಗರಂ ಆದ ಸಚಿವರು, ಮನವಿಕಾರರ ವಿರುದ್ದ ಕಿಡಿಕಾರಿ ನಿಮಗೆ ಶೋಷಣೆ ಅನ್ನುವ ಪದದ ಅರ್ಥ ಗೊತ್ತ ಅಂತ ಹೇಳಿದರು. ಇನ್ನೂ ನಿಮ್ಮನ್ನು, ಕಾಲು ಕಟ್ಟಿಹಾಕಿ ಯಾರೂ ನಿಮ್ಮನ್ನ ಕರೆತಂದಿಲ್ಲ. ಇಷ್ಟ ಇದ್ದರೆ ಕೆಲಸ ಮಾಡಿ, ಇಲ್ಲ ಅಂದ್ರೆ ಪರೀಕ್ಷೆ ಬರೆದು ಬೇರೆ ದಾರಿ ನೋಡಿಕೊಳ್ಳಿ ಅಂತ ಹೇಳಿದರು. ಇದೇ ವೇಳೆ ಸಚಿವರ ಈ ಹೇಳಿಕೆಗೆ ಅತಿಥಿ ಉಪನ್ಯಾಸಕರು ತೀವ್ರವಾದ ವಿರೋಧ ವ್ಯಕ್ತಪಡಿಸಿ, ಕೂಡಲೇ ಸಚಿವರು ಸಾರಿ ಕೇಳಬೇಕು ಅಂತ ಒತ್ತಾಯಿಸಿದ್ದರು.