`ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ಸಾವು ಕೇಸ್ : ನಿರ್ಮಾಪಕ, ನಿರ್ದೇಶಕ ಸೇರಿ ಐವರ ವಿರುದ್ಧ `FIR’ ದಾಖಲು

ಬೆಂಗಳೂರು : ಸ್ಯಾಂಡಲ್ ವುಡ್ ನ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಐದು ಜನರ ವಿರುದ್ಧ ಬಿಡಿದಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಲವ್ ಯೂ ರಚ್ಚು ಸಿನಿಮಾದ ನಿರ್ದೇಶಕ ಶಂಕರ ಎ1, ನಿರ್ಮಾಪಕ ಗುರುದೇಶಪಾಂಡೆ ಎ2 ಆರೋಪಿ, ಸಿನಿಮಾದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3 ಆರೋಪಿ, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಆರೋಪಿ, ಕ್ರೇನ್ ಅಪರೇಟರ…

Read More

‘ಫೋನ್ ಕಾಲ್’ ನಿಂದ ನನಗೆ ಸಚಿವ ಸ್ಥಾನ ತಪ್ಪಿತು: ರಾಮದಾಸ್

ಮೈಸೂರು : ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿಗೆ ಬಂದರೂ ಸಹ ಸಿಎಂ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿಗೆ ಬಂದಿದ್ದರೂ ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್ ಭೇಟಿ ಮಾಡಲಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಸ್ಥಾನ ತಪ್ಪಿರುವುದರ ಹಿನ್ನೆಲೆಯಲ್ಲಿ ರಾಮದಾಸ್ ಅವರು ಸಿಎಂ ಬೊಮ್ಮಾಯಿ ಭೇಟಿ ಮಾಡಿಲ್ಲ ಎಂದು ತಿಳಿದು ಬಂದಿದೆ. ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಜಿಲ್ಲೆಯ ಬಿಜೆಪಿ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಜೆಡಿಎಸ್ ಶಾಸಕ…

Read More

ಮುಂಡಗೋಡ ಎಸ್.ಎಸ್.ಎಲ್.ಸಿ ಫಲಿತಾಂಶ : ಶೇ.99.92

ಮುಂಡಗೋಡ : ಮುಂಡಗೋಡ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ.99.92ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 669 ವಿದ್ಯಾರ್ಥಿಗಳು ಮತ್ತು 742 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 17 ಪ್ರೌಢಶಾಲೆಗಳಿವೆ ಅದರಲ್ಲಿ 13 ಪ್ರೌಢಶಾಲೆಗಳು ಎ ಗ್ರೇಡ್ ಹೊಂದಿದೆ. ಉಳಿದ ನಾಲ್ಕು ಶಾಲೆಗಳು ಬಿ ಗ್ರೇಡ್ ಹೊಂದಿದೆ. ತಾಲೂಕಿನಲ್ಲಿ 40 ವಿದ್ಯಾರ್ಥಿಗಳು ಎ ಪ್ಲಸ್ ಪಡೆದು ತೇರ್ಗಡೆಯಾಗಿದ್ದಾರೆ. 222 ವಿದ್ಯಾರ್ಥಿಗಳು ಎ ಪ್ಲಸ್ ಮತ್ತು 738 ವಿದ್ಯಾರ್ಥಿಗಳು ಬಿ ಪ್ಲಸ್ ಪಡೆದರೆ, 411 ವಿದ್ಯಾರ್ಥಿಗಳು ಸಿ ಗ್ರೇಡ್ …

Read More

ಬೈಕ್ – ಬೊಲೇರೋ ಡಿಕ್ಕಿ : ಹಿರೇಹಳ್ಳಿಯ ವ್ಯಕ್ತಿ ಸಾವು

ಮುಂಡಗೋಡ : ಬೈಕ್ – ಬೊಲೇರೋ ವಾಹನ ನಡುವೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆಯೊಂದು ತಾಲೂಕಿನ ಗಡಿಭಾಗವಾದ ವಡಗೇರಿ ಬಳಿ ಇಂದು ಸಂಜೆ ನಡೆದಿದೆ. ಮುಂಡಗೋಡ ತಾಲೂಕಿನ ಹಿರೇಹಳ್ಳಿ ಗ್ರಾಮದ  ಸದಾನಂದ ಜಗನ್ನಾಥ ಮಟ್ಟಿಮನಿ ಎಂಬಾತನೇ  ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಸ್ಥಳಕ್ಕೆ ಬನವಾಸಿ ಪಿ.ಎಸ್.ಐ. ಹನುಮಂತ ಬಿರಾದಾರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಸುಧಾಮೂರ್ತಿಯವರಿಂದ ಭೂಮಿಯ ಸೌಂದರ್ಯ ವಿವರಿಸುವ ಪುಸ್ತಕ

ನವದೆಹಲಿ: ಭೂಮಿಯ ಸೌಂದರ್ಯವನ್ನು ವಿಭಿನ್ನ ಬಗೆಯಲ್ಲಿ ವಿವರಿಸುವ ‍ಪುಸ್ತಕವನ್ನು ಖ್ಯಾತ ಲೇಖಕಿ ಸುಧಾ ಮೂರ್ತಿ ಅವರು ಈ ಬಾರಿ ಬರೆದಿದ್ದಾರೆ. ಭೂಮಿಯ ಕುರಿತ ಅದ್ಭುತ ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ. ‘ಹೌ ದ ಅರ್ಥ್ ಗಾಟ್‌ ಇಟ್ಸ್‌ ಬ್ಯೂಟಿ’ ಶೀರ್ಷಿಕೆಯ ಪುಸ್ತಕವನ್ನು ‘ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಇಂಪ್ರಿಂಟ್‌ ಪಫಿನ್‌’ ಪ್ರಕಟಿಸಿದೆ. ಐದರಿಂದ ಎಂಟು ವರ್ಷದ ಮಕ್ಕಳಿಗಾಗಿ ಈ ಪುಸ್ತಕ ರಚಿಸಲಾಗಿದೆ. ಪುಸ್ತಕದಲ್ಲಿನ ವರ್ಣ ರಂಜಿತ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತವೆ. ‘ಪ್ರವಾಸದ ಸಂದರ್ಭದಲ್ಲಿ ವಿಭಿನ್ನ ರೀತಿಯ ಭೂದೃಶ್ಯಗಳು, ಮಂಜು…

Read More

ಸಚಿವ ಹೆಬ್ಬಾರ ಅವರನ್ನು ಅಭಿನಂದಿಸಿದ ವಿಧಾನಸಭಾ ಅಧ್ಯಕ್ಷ ಕಾಗೇರಿ

ಶಿರಸಿ : ಕಾರ್ಮಿಕ ಸಚಿವರಾಗಿ ಎರಡನೆ ಬಾರಿಗೆ ಸಂಪುಟ ಸೇರಿದ ಶಿವರಾಮ ಹೆಬ್ಬಾರ ಅವರನ್ನು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಶಿರಸಿಯ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಸಂಪುಟ ಸೇರ್ಪಡೆ ಬಳಿಕ ಶಿವರಾಮ ಹೆಬ್ಬಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದರು. ಕಾಗೇರಿ ಅವರ ಕಚೇರಿಗೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ವೇಳೆ ವಿಧಾನಸಭಾ ಅಧ್ಯಕ್ಷ ಹಾಗೂ ಸಚಿವರು ಇಬ್ಬರೇ ಇದ್ದರು. ಮಾತುಕತೆ ಮುಗಿದ ಬಳಿಕ ಕೊಠಡಿಯಿಂದ ಹೊರಬಂದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ…

Read More

ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟ: ಶೇ.99.9 ವಿದ್ಯಾರ್ಥಿಗಳು ಪಾಸ್

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದರು. ಕೋವಿಡ್ ಕಾರಣದಿಂದ ಈ ಬಾರಿ ವಿಶಿಷ್ಟ ರೀತಿಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಮೂರು ವಿಷಯಗಳನ್ನೊಳಗೊಂಡ ಒಂದು ಪತ್ರಿಕೆಯಂತೆ ಒಟ್ಟು ಎರಡು ದಿನ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದಿರುವ ಎಲ್ಲರನ್ನೂ ಉತ್ತೀರ್ಣಗೊಳಿಸುವುದಾಗಿ ಸರ್ಕಾರ ಈಗಾಗಲೇ ಘೋಷಣೆ ಮಾಡಿತ್ತು. ಅಂಕ ಆಧಾರಿತ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು…

Read More

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನೋತ್ಸವ ಆಚರಿಸಲು ಮನವಿ

ಮುಂಡಗೋಡ : ಸ್ವಾತಂತ್ರ್ಯೊತ್ಸವ ದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನೋತ್ಸವವನ್ನು ಸರಕಾರಿ ಶಾಲಾ, ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಆಚರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅಭಿಮನಿ ಬಳಗದವರು ಇಂದು ಮುಂಡಗೋಡ ತಹಶೀಲದಾರರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಶಿವಣ್ಣ ಕುಂದರಗಿ, ಮಂಜುನಾಥ ಕುರುಬರ, ಮಂಜುನಾಥ ಕೋಣನಕೇರಿ, ಮಂಜುನಾಥ ನಡಗೇರಿ, ಕೃಷ್ಣ ಕುಂದರಗಿ, ಗುಡ್ಡಪ್ಪ ಸುಣಗಾರ, ಪ್ರವೀಣ ಕಳಸಗೇರಿ, ಮಾಂತೇಶ ಪೂಜಾರಿ, ರವಿ ನಡಗೇರ,…

Read More

ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಮಂಜು ಪಾವಗಡ

ಬೆಂಗಳೂರು : ಇಷ್ಟು ದಿನ ಎಲ್ಲರ ಗಮನ ಸೆಳೆದು ಕುತೂಹಲ ಮೂಡಿಸಿದ್ದ ಕನ್ನಡದ ಬಿಗ್ ಬಾಸ್ ಗೆ ತೆರೆ ಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಕೊನೆಯ ಹಂತದಲ್ಲಿ ದೊಡ್ಮನೆಯಲ್ಲಿ ಉಳಿದಿದ್ದ ಟಾಪ್ 3 ಕಂಟೆಸ್ಟೆಂಟ್ ಗಳಾದ ಮಂಜು, ಅರವಿಂದ್ ಮತ್ತು ದಿವ್ಯಾ ನಡುವೆ ಭಾರೀ ಪೈಪೋಟಿ ನಡೆದಿತ್ತು. ಆದರೆ ಕೊನೆಗೆ ಮಂಜು ಪಾವಗಡ ವಿನ್ನರ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಇದರಿಂದ ಅರವಿಂದ್ ಕೆಪಿ ರನ್ನರ್ ಅಪ್…

Read More

ಖ್ಯಾತ ಹಿಂದಿ ಕಿರುತೆರೆ ನಟ ಅನುಪಮ್ ಶ್ಯಾಮ್ ನಿಧನ

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅನುಪಮ್ ಶ್ಯಾಮ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರನ್ನು ಕೆಲ ದಿನಗಳ ಹಿಂದೆ ಗೋರೆಗಾಂವ್ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದ ಕಾರಣ ಡಯಾಲಿಸಿಸ್ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೆಚ್ಚ ಭರಿಸುವಂತೆ ಅವರ ಸಹೋದರ ಅನುರಾಗ್ ನೆರವು ಯಾಚಿಸಿದ್ದರು. ‘ಸತ್ಯ’, ‘ದಿಲ್ ಸೇ’, ‘ಲಗಾನ್’ ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು ಅನುಪಮ್‌. ‘ಕಳೆದ ವರ್ಷ ಮನ್‌ ಕೀ…

Read More