Headlines

Raj Newsline

ಅಂತಿಮ ಮತದಾರರ ಪಟ್ಟಿ

ಮುಂಡಗೋಡ : 2021ರ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಅಂತಿಮ ಮತದಾರರ ಪಟ್ಟಿಯನ್ನು ತಹಶೀಲದಾರ ಕಾರ್ಯಾಲಯ ಹಾಗೂ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಸಾವ‍್ಜನಿಕರ ತಿಳುವಳಿಕೆಗಾಗಿ ಪ್ರಕಟಿಸಲಾಗಿದೆ ಎಂದು ಮುಂಡಗೋಡ ತಹಸೀಲದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

Read More

ಎನ್.ಆರ್.ಎಲ್.ಎಂ. ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚರ್ಚೆ

ಮುಂಡಗೋಡ : ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಅವರು ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಎನ್‍ಆರ್‍ಎಲ್‍ಎಂ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಮತ್ತು ಸ್ವ ಸಹಾಯ ಸಂಘದ ಸದಸ್ಯರೊಂದಿಗೆ ಚರ್ಚೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.    ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕಟ್ಟಿ, ಸಹಾಯಕ ನಿರ್ದೇಶಕರಾದ ದಾಸನಕೊಪ್ಪ, ಸಂಜೀವಿನಿ ಜಿಲ್ಲಾ ಅಭಿಯಾನ ಘಟಕದ ಡಿ.ಪಿ.ಎಂ. ನಾಗರಾಜ ಕಲ್ಮನೆ, ಪಿ.ಡಿ.ಒ. ಸೋಮಲಿಂಗಪ್ಪ ಛಬ್ಬಿ, ತಾ.ಪಂ. ಸಂಜೀವಿನಿ ವಲಯ ಮೇಲ್ವಿಚಾರಕರಾದ ಶ್ಯಾಮಲಾ ನಾಯ್ಕ, ಒಕ್ಕೂಟದ ಅಧ್ಯಕ್ಷರಾದ…

Read More

ಕಳ್ಳತನ ಪ್ರಕರಣ : 8 ಆರೋಪಿಗಳ ಬಂಧನ, 19ಲಕ್ಷರೂ. ಚಿನ್ನಾಭರಣ ವಶ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 7 ಜನ ಆರೋಪಿತರನ್ನು ಹಾಗೂ ಒಬ್ಬ ಕಳುವಿನ ಮಾಲನ್ನು ಸ್ವೀಕರಿಸುವ ವ್ಯಕ್ತಿ ಸೇರಿದಂತೆ 8 ಜನರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.    ಗೋಕರ್ಣ ಪೊಲೀಸ್ ಠಾಣೆಯ 5 ಪ್ರಕರಣಗಳು,ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ 11 ಪ್ರಕರಣಗಳು ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿದಂತೆ ಒಟ್ಟೂ 18 ಕಳ್ಳತನ…

Read More

ವಿದ್ಯುತ್ ಕಂಬಕ್ಕೆ ಡಿಕ್ಕಿ : ಬೈಕ್ ಸವಾರ ಸಾವು

  ಕುಮಟಾ : ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆಯೊಂದು ಕುಮಟಾ ತಾಲೂಕಿನ ಭಾವಿಕೊಡ್ಲ ಗ್ರಾಮದ ಬಳಿ ನಡೆದಿದೆ.     ಮೃತ ವ್ಯಕ್ತಿಯನ್ನು ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಮುಡ್ರಾಣಿಯ ನಿವಾಸಿ ಪ್ರಸನ್ನ ದೇವುಗೌಡ ಎಂದು ಗುರುತಿಸಲಾಗಿದೆ. ಗೋಕರ್ಣದಲ್ಲಿ ಮದುವೆ ಕಾರ್ಯ ಮುಗಿಸಿ ವಾಪಾಸ್ಸಾಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

Read More

ಮಲೇರಿಯಾ ವಿರೋಧಿ ಮಾಸಾಚರಣೆ

ಮುಂಡಗೋಡ: ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಸೋಮವಾರ ಸರಕಾರಿ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.    ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಚ್.ಎಫ್.ಇಂಗಳೆ, ಮಲೇರಿಯಾ ರೋಗವೂ ಸೊಳ್ಳೆಯಿಂದ ಹರಡುವ ರೋಗವು 2016ರಲ್ಲಿ 3 ಪ್ರಕರಣ ಹಾಗೂ 2018ರಲ್ಲಿ ಮೂರು ಪ್ರಕರಣ ಹೊರತು ಪಡಿಸಿದರೆ ಕಳೆದ ಐದು ವರ್ಷದಲ್ಲಿ ಇದುವರೆಗೂ ಒಂದು ಪ್ರಕರಣವೂ ದಾಖಲಾಗಿಲ್ಲ. ಈ ಮಲೇರಿಯಾ ರೋಗ ಗೋವಾ ಹಾಗೂ ಮಂಗಳೂರ ಭಾಗಕ್ಕೆ ಕೂಲಿ ಕೆಲಸಕ್ಕೆ ಹೋದವರಿಗೆ ಕಾಣಿಸಿಕೊಂಡಿತ್ತು. ಇದೀಗ ಇಂತಹ…

Read More

2-3 ವಾರದಲ್ಲಿ ಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗುವುದು : ಪ್ರಿಯಾಂಗಾ

ಮುಂಡಗೋಡ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವರ ವಿಡಿಯೋ ಕಾನ್ಪರೇನ್ಸನಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ ಭಾಗವಹಿಸಿ ನಂತರ ಪತ್ರಕರ್ತರ ಜೊತೆ ಮಾತನಾಡುತ್ತಾ, 2-3ವಾರಗಳಲ್ಲಿ ಬರುವ ಎಸ್‍.ಎಸ್‍.ಎಲ್‍.ಸಿ. ಪರೀಕ್ಷೆಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುವುದು. ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 128 ಕೇಂದ್ರಗಳಲ್ಲಿ ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಜಿಲ್ಲಾಡಳಿತದಿಂದ ತಯಾರು ಮಾಡಲಾಗುತ್ತಿದೆ. ಹಾಸ್ಟೇಲ್‍ನಲ್ಲಿರುವ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗುವುದು ಹಾಗೂ ಪರೀಕ್ಷೆಗೆ ಬರುವ ಶಿಕ್ಷಕರಿಗೆ ಆರ್‍ಟಿಪಿಸಿಆರ್ ಪರೀಕ್ಷೆ…

Read More

ನ್ಯಾಸರ್ಗಿ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡಲು ನಿರ್ಧಾರ

ಮುಂಡಗೋಡ : ಹೋಬಳಿ ಮಟ್ಟದಲ್ಲಿ ಒಂದೊಂದು ಅಂಗನವಾಡಿಗಳನ್ನು ಮಾದರಿ ಅಂಗನವಾಡಿಯನ್ನಾಗಿ ಮಾಡಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮುಂದಾಗಿದ್ದು  ಅದರಂತೆ ಮುಂಡಗೋಡ ತಾಲೂಕಿನ  ನ್ಯಾಸರ್ಗಿ ಅಂಗನವಾಡಿ ಕೆಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರ ಮಾಡಲು ನಿರ್ಧರಿಸಿದ್ದಾರೆ.    ನ್ಯಾಸರ್ಗಿ ಅಂಗನವಾಡಿ ಕೇಂದ್ರ ಈಗಾಗಲೆ ಮಾದರಿ ಅಂಗನವಾಡಿಯಾಗಿದ್ದು  ಅಂಗನವಾಡಿ ಕೇಂದ್ರದ ಒಳಗೆ ಹೋದರೆ ಮಕ್ಕಳ ಕಲಿಕೆಗೆ ಬೇಕಾಗುವ ಪೂರಕ ವಾತಾವರಣ ಹೊಂದಿದ್ದು ಆಟ ಹಾಗೂ ಪಾಠಗಳಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಪರಿಕರಗಳು ಈ ಅಂಗನವಾಡಿಯಲ್ಲಿವೆ. ಅಂಗನವಾಡಿ ಸುತ್ತಮುತ್ತಲು ಹೂವಿನ ಗಿಡಗಳು…

Read More

ಮಹಾರಾಷ್ಟ್ರ, ಕೇರಳಗಳಿಂದ ರಾಜ್ಯಕ್ಕೆ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ : ಸಚಿವ ಡಾ.ಸುಧಾಕರ

ಬೆಂಗಳೂರು : ಮಹಾರಾಷ್ಟ್ರ ಮತ್ತು ಕೇರಳಗಳಿಂದ ರಾಜ್ಯಕ್ಕೆ ಬರುವವರು ಕೊರೊನಾ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.   ಡೆಲ್ಟಾ+ ಹೆಚ್ಚಿರುವ ಮಹಾರಾಷ್ಟ್ರ ಕೇರಳಗಳಿಂದ ರಾಜ್ಯಕ್ಕೆ ಬರುವವರ ಮೇಲೆ ಇರಿಸಲಾಗುತ್ತದೆ. ಗಡಿ ಭಾಗದಲ್ಲಿ ಹೆಚ್ಚಿನ ನಿಗಾವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.    ಹತ್ತು ವರ್ಷದೊಳಗಿನ ಮಕ್ಕಳ ಹೆತ್ತವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು. ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸರ ಕುಟುಂಬದವರು, ಮಾಧ್ಯಮದವರಿಗೂ ಆದ್ಯತೆ ನೀಡಲಾಗುವುದು ಎಂದರು.

Read More