ಮೀಸಲಾತಿ ಪ್ರಕಟ : ರಾಜಕೀಯ ಪಕ್ಷಗಳಲ್ಲಿ ತೀವ್ರ ಚಟುವಟಿಕೆ
ಮುಂಡಗೋಡ: ತಾಲೂಕ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ತೀವ್ರ ಚಟುವಟಿಕೆ ಆರಂಭಗೊಂಡಿದೆ. ಕಾಂಗ್ರೆಸ್ ಪಕ್ಷವು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ತಯಾರಿ ನಡೆಸಿದೆ. ಇತ್ತೀಚೆಗಷ್ಟೇ ಕೆಪಿಸಿಸಿ ಸದಸ್ಯ ಪ್ರಶಾಂತ್ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸಿದೆ. ಬಿಜೆಪಿ ಸಹ ಚುನಾವಣೆ ಚಟುವಟಿಕೆ ಬಿರುಸುಗೊಳಿಸಿದೆ. ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳು ತಮ್ಮ ಕ್ಷೇತ್ರದಲ್ಲಿ ಜನಸಂಪರ್ಕ ಆರಂಭಿಸಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಇಷ್ಟು ದಿನ ಮೌನವಾಗಿತ್ತು. ಆದರೆ…
ತವರಿನಿಂದ ಬಾರದ ಪತ್ನಿ : ಪತಿ ಸಾವು
ಮುಂಡಗೋಡ : ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ತವರು ಮನೆಗೆ ಹೋಗಿದ್ದ ಪತ್ನಿ, ಮರಳಿ ಬಾರದಿರುವುದರಿಂದ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕ್ರಿಮಿನಾಶಕ ಸೇವಿಸಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಇಂದು ಜರುಗಿದೆ. ಬಸವರಾಜ ಭರಮಣ್ಣ ಕುರಿಯವರ(36) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಪತ್ನಿಯ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ ಈತ, ಜುಲೈ1ರಂದು ರಾತ್ರಿ ಸಮಯದಲ್ಲಿ ಯಾವುದೋ ಕ್ರಿಮಿನಾಶಕ ಔಷಧಿ ಕುಡಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದನು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ…
ಸಚಿವ ಹೆಬ್ಬಾರ ಕಾರ್ಯಕ್ರಮ ಮುಂದೂಡಲಾಗಿದೆ : ಪ್ರಕಟಣೆ
ಮುಂಡಗೋಡ : ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರು ತುರ್ತಾಗಿ ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಇಂದು ಹಾಜರಾಗಬೇಕಾಗಿರುವುದರಿಂದ ಇಂದು ಮತ್ತು ನಾಳೆ ಮುಂಡಗೋಡ ತಾಲೂಕಿನ ಎಲ್ಲಾ ಕಾರ್ಯಕ್ರಮಗಳು ಮತ್ತು ಹೆಬ್ಬಾರ ರೇಶನ ಕಿಟ್ ವಿತರಣೆ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಸಚಿವರ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಕೋಡಿನಲ್ಲಿ ದೋಣಿ ಮುಳುಗಡೆ : ಓರ್ವ ನಾಪತ್ತೆ, ಮೂವರ ರಕ್ಷಣೆ
ಹೊನ್ನಾವರ : ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿಯೊಂದು ಮುಳುಗಡೆಯಾಗಿ ದೋಣಿಯಲ್ಲಿದ್ದ ಮೂರು ಜನ ಮೀನುಗಾರರ ರಕ್ಷಣೆ ಮಾಡಿದ್ದು,ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡು ಭಾಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಉದಯ್ ದಾಮೋದರ್ ತಾಂಡೇಲ್ (30) ಕಾಣೆಯಾದ ಮೀನುಗಾರನಾಗಿದ್ದಾನೆ. ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್ (49),ಶಂಕರ್ ಮಾದೇವ ತಾಂಡೇಲ್ ( 38), ಕಾಮೇಶ್ವರ್ ದೇವಯ್ಯ ತಾಂಡೇಲ್ (39) ರಕ್ಷಣೆಗೊಳಗಾದವರಾಗಿದ್ದಾರೆ. ಇಂದು ಬೆಳಿಗ್ಗೆ ಸಮುದ್ರ ಮೀನುಗಾರಿಕೆಗೆ ಹೊನ್ನಾವರದ ಕಾಸರಕೋಡ ಭಾಗದಿಂದ ತೆರಳಿದ್ದ ದೋಣಿ ಹೊನ್ನಾವರದ ಇಕೋ ಬೀಚ್ ಬಳಿ ಅಲೆಗಳ…
ಮುಂಡಗೋಡ : ದೇವರ ದರ್ಶನ ಪಡೆದ ಜನರು
ಮುಂಡಗೋಡ : ರಾಜ್ಯ ಸರಕಾರವು ದೇವಸ್ಥಾನಗಳಿಗೆ ಓಪನ್ ಮಾಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಂಡಗೋಡ ನಗರದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗ್ರಾಮದೇವಿ ಶ್ರೀದ್ಯಾಮವ್ವದೇವಿ( ಶ್ರೀಮಾರಿಕಾಂಬಾದೇವಿ)ಯ ದೇವಸ್ಥಾನ ಓಪನ್ ಆಗಿದ್ದು, ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಯಲ್ಲಾಪುರದಲ್ಲಿ ಅಂತರ ಜಿಲ್ಲಾ ಕಳ್ಳರ ಬಂಧನ : 2 ಲಕ್ಷರೂ. ಮೌಲ್ಯದ ಚಿನ್ನಾಭರಣ ವಶ
ಯಲ್ಲಾಪುರ : ಅಪ್ರಾಪ್ತ ಬಾಲಕ ಸೇರಿ ಅಂತರ ಜಿಲ್ಲಾ ಕಳ್ಳರಿಬ್ಬರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 2 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ಯಲ್ಲಾಪುರದಲ್ಲಿ ಇಂದು ನಡೆದಿದೆ. ಧಾರವಾಡ ಜಿಲ್ಲೆಯ ಲಕ್ಷ್ಮೀಸಿಂಗನಕೇರಿ ಮೂಲದ ಹುಲಗಪ್ಪ ಹುಲಗೇಶ ಬಂಡಿವಡ್ಡರ (32) ಹಾಗೂ ಇನ್ನೊಬ್ಬ ಅಪ್ರಾಪ್ತನ ಬಂಧನ ಮಾಡಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 2020 ರ ಡಿಸೆಂಬರ್ ನಲ್ಲಿ ಯಲ್ಲಾಪುರದ ಶಾರದಾ ನಗರದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದ…