ಗೋವಿನಜೋಳಕ್ಕೆ ಸೈನಿಕ ಹುಳುವಿನ ಬಾಧೆ
ಮುಂಡಗೋಡ : ತಾಲೂಕಿನ ಗ್ರಾಮೀಣ ಭಾಗದಲ್ಲಿನ ಗೋವಿನಜೋಳ ಬೆಳೆಗೆ ಸೈನೀಕ ಹುಳು ಭಾದೆ ಕಂಡು ಬಂದಿದ್ದು ರೈತರು ಸೂಕ್ತ ಔಷಧೋಪಚಾರ ಮಾಡುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಎಂ.ಎಸ್.ಕುಲಕರ್ಣಿ ತಿಳಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಸಾವಿರಾರು ರೈತರು ಗೋವಿನಜೋಳ ಬೆಳೆ ಬೆಳೆದಿದ್ದು ಇದೀಗ ಕೆಲವು ಗ್ರಾಮಗಳಲ್ಲಿ ಗೋವಿನಜೋಳ ಬೆಳೆಗೆ ಸೈನೀಕ ಹುಳು ಭಾದೆ ಕಾಣಿಸಿಕೊಂಡಿದೆ. ಈ ಸೈನಿಕ ಹುಳು ಗಿಡದ ಏಲೆಗಳನ್ನು ತಿನ್ನುವ ಮೂಲಕ ಗಿಡದ ಕಾಂಡವನ್ನು ಸಹ ತಿಂದು ಹಾಕುತ್ತದೆ. ಆದ್ದರಿಂದ ಸೈನಿಕ ಹುಳು ಭಾದೆ…
ಎ.ಎಸ್.ಐ. ಸೇರಿದಂತೆ 7 ಪೊಲೀಸರಿಗೆ ವರ್ಗಾವಣೆ
ಮುಂಡಗೋಡ : ಎ.ಎಸ್.ಐ. ಸೇರಿದಂತೆ ಒಟ್ಟು 7 ಜನ ಪೊಲೀಸರಿಗೆ ಮುಂಡಗೊಡ ಪೊಲೀಸಠಾಣೆಯಿಂದ ವರ್ಗಾವಣೆಯಾಗಿದೆ. ಎ.ಎಸ್.ಐ. ಅಶೋಕ ರಾಠೋಡ, ಖೀರು ಘಟಕಾಂಬಳೆ, ರಾಘು ನಾಯ್ಕ, ಭಗವಾನ ಗಾಂವಕರ, ಕುಮಾರ ಬಣಕಾರ, ಗುರು ನಾಯಕ ಮತ್ತು ಮಹಿಳಾ ಪೊಲೀಸ ಪೂಜಾ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡ ಪೊಲೀಸರಿಗೆ ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿ.ಪಿ.ಐ. ಪ್ರಭುಗೌಡ, ಪಿ.ಎಸ್.ಐ. ಬಸವರಾಜ ಮಬನೂರ ಮತ್ತು ಎನ್.ಡಿ.ಜಕ್ಕಣ್ಣವರ್ ಇತರರು ಇದ್ದರು.
ದೇಶಪಾಂಡೆ ರುಡಸೆಟಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ
ಮುಂಡಗೋಡ : ದೇಶಪಾಂಡೆ ರುಡಸೆಟಿ ಮುಂಡಗೋಡರವರು ಇಂದು ತಾಲೂಕಿನ ಇಂದೂರ, ನಂದಿಕಟ್ಟಾ ಮತ್ತು ಹುನಗುಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ ಕಾಂಗ್ರೆಸ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಸದಸ್ಯರು ಹಾಗೂ ದೇಶಪಾಂಡೆ ರುಡಸೆಟಿ ಸಿಬ್ಬಂದಿಗಳು ಇದ್ದರು.
ಆಧಾರ ಕಾರ್ಡ ತಿದ್ದುಪಡಿ ಮಾಡಲು ಸರದಿ ಸಾಲಿನಲ್ಲಿ ನಿಂತ ಜನರು
ಮುಂಡಗೋಡ: ಆಧಾರ ಕಾರ್ಡನಲ್ಲಿ ಹೆಸರುಗಳ ತಿದ್ದುಪಡಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಇಂದು ಕಂಡು ಬಂತು. ಪಟ್ಟಣದ ಬಸ್‍ನಿಲ್ದಾಣದ ಮುಂಭಾಗದಲ್ಲಿನ ಎಸ್‍ಬಿಐ ಬ್ಯಾಂಕ್‍ನಲ್ಲಿ ಆಧಾರ ಕಾರ್ಡ ತಿದ್ದುಪಡಿ ಮಾಡುತ್ತಿದ್ದು ಆದ್ದರಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಬ್ಯಾಂಕ್ ಬಳಿ ಸರದಿ ಸಾಲಲ್ಲಿ ನಿಂತು ಆಧಾರ ಕಾರ್ಡ ತಿದ್ದುಪಡಿಯನ್ನು ಮಾಡಿಸುತ್ತಿರುವುದು ಕಂಡು ಬಂತು.
ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮ
ಮುಂಡಗೋಡ: ಉಚಿತ ಲಸಿಕೆ ಅಭಿಯಾನಕ್ಕೆ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ, ಕೊರೋನಾದಂತಹ ಮಹಾಮಾರಿಯನ್ನು ತಡೆಗಟ್ಟಲು ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದರು. ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಕೊರೋನಾದಂತಹ ಮಹಾಮಾರಿಯಿಂದಾಗಿ ಜನರು ಕೆಲಸವಿಲ್ಲದೆ…
ಅನಲಾಕ್ : ಮುಂಡಗೋಡನಲ್ಲಿ ಜನದಟ್ಟಣೆ
ಮುಂಡಗೋಡ : ಇಂದು ಅನಲಾಕ್ ಆದ ಹಿನ್ನೆಲೆಯಲ್ಲಿ ಮುಂಡಗೋಡನಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಗ್ರಾಮೀಣ ಭಾಗದಿಂದಲೂ ಇಂದು ಜನರು ಹೆಚ್ಚಾಗಿ ಬಂದು ವಸ್ತುಗಳನ್ನು ಖರೀದಿಸಿದರು. ಸಾಮಾಜಿಕ ಅಂತರವನ್ನು ಎಲ್ಲರೂ ಮರೆತಿರುವುದು ಕಂಡುಬಂತು. ಕೆಲವರು ಮಾಸ್ಕ ಧರಿಸದೇ ತಿರುಗಾಡುತ್ತಿದ್ದರು. ಕಿರಾಣಿ ಅಂಗಡಿ ಮತ್ತು ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದರು.
ಹಾಳಾದ ರಸ್ತೆ ದುರಸ್ತಿ ಮಾಡುವಂತೆ ಜನರ ಆಗ್ರಹ
ಮುಂಡಗೋಡ : ಎರಡು ದಿನ ನಿರಂತರವಾಗಿ ಮಳೆ ಸುರಿದಿದ್ದರಿಂದ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯ ನೀರು ಹರಿದು ಕೆಲವೆಡೆ ರಸ್ತೆ ಕಿತ್ತು ಹೋಗಿದೆ. ಯಲ್ಲಾಪುರ ರಸ್ತೆಯ ಮಾರ್ಗವಾಗಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತದೆ. ಈಗ ಈ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಳಾದ ರಸ್ತೆಯನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಣಜ ಮುಂಡಗೋಡ ವತಿಯಿಂದ ಸಂಗ್ರಹಿಸಿದ ಆಹಾರ ಕಿಟ್ ಎಂ.ಎಲ್.ಸಿ. ಶಾಂತಾರಾಮ ಸಿದ್ದಿಯಿಂದ ವಿತರಣೆ
ಮುಂಡಗೋಡ : ಎಂ.ಎಲ್.ಸಿ. ಶಾಂತಾರಾಮ ಸಿದ್ದಿ ಅವರು ಕಣಜಮುಂಡಗೋಡ ವತಿಯಿಂದ ಸಂಗ್ರಹಿಸಿದ ಆಹಾರ ಕಿಟಗಳನ್ನು ಮುಂಡಗೋಡ ತಾಲೂಕಿನ ಜೋಗೇಶ್ವರ ಹಳ್ಳ, ಜೇನುಮುರಿ, ಸಿರಿಗೇರಿ, ಚವಡಳ್ಳಿ, ಬ್ಯಾನಳ್ಳಿ ಭಾಗದಲ್ಲಿ ಕಡುಬಡವರಿಗೆ ಹಾಗೂ ಕೋವಿಡ್ ಸೋಂಕಿನಿಂದ ಬಳಲಿದವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್.ಪಾಟೀಲ ಹಾಗೂ ಬಿ.ಜೆ.ಪಿ. ಮುಖಂಡರು ಇದ್ದರು.
ಕಾಲುವೆ ದುರಸ್ತಿ ಮಾಡುವಂತೆ ರೈತರ ಮನವಿ
ಮುಂಡಗೋಡ : ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯಕ್ಕೆ ಸೇರುವ ಮಳೆ ನೀರು ಕಾಲುವೆ ಒಡ್ಡು ಒಡೆದು ಅರಣ್ಯ ಪಾಲಾಗುತ್ತಿದೆ. ಒಡೆದ ಕಾಲುವೆ ದುರಸ್ತಿ ಮಾಡಿಸಿಕೊಡುವಂತೆ ಸನವಳ್ಳಿ ಗ್ರಾಮದ ರೈತರು ತಹಶೀಲದಾರ ಶ್ರೀಧರ ಮುಂದಲಮನಿ ಅವರಿಗೆ ಮನವಿ ಸಲ್ಲಿಸಿದರು.