ಮುಂಡಗೋಡ : ಬಸಸ್ಟ್ಯಾಂಡ ಕಂಪೌಂಡನೊಳಗಿಟ್ಟಿದ್ದ ಹೊಂಡಾ ಮೋಟಾರ ಬೈಕ್ ಕಳುವಾದ ಘಟನೆ ನಡೆದಿದೆ.
ತಾಲೂಕಿನ ಚವಡಳ್ಳಿ ಗ್ರಾಮದ ರಮೇಶ ಕೊಪ್ಪದ ಎಂಬುವರೇ ಬೈಕ್ ಕಳೆದುಕೊಂಡವರಾಗಿದ್ದಾರೆ. ಸೆ.6ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ಬಸಸ್ಟ್ಯಾಂಡ ಕಂಪೌಂಡನೊಳಗಿರುವ ಖುಲ್ಲಾ ಜಾಗದಲ್ಲಿ ನಿಲ್ಲಿಸಿಟ್ಟಿದ್ದ ಕೆಂಪು ಬಣ್ಣದ ಹೊಂಡಾ ಶೈನ್ ಮೋಟಾರ ಸೈಕಲ್ (KA 31/V-6862) ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ರಮೇಶ ಕೊಪ್ಪದ ಪೊಲೀಸ್ ಠಾಣೆಗೆ ಬುಧವಾರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.