
ಮುಂಡಗೋಡ : ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಸುಭಾಸ ಲಮಾಣಿ ಅವರ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಮೃತ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಅವರ ಪತಿ ಸುಭಾಸ ಲಮಾಣಿ ಅವರು ಪೊಲೀಸ ಠಾಣೆಗೆ ದೂರೊಂದು ನೀಡಿದ್ದು, ಇದು ಇಡೀ ಮುಂಡಗೋಡ ನಗರದಲ್ಲಿ ಹಲ್ ಚಲ್ ಮೂಡಿಸಿದೆ.
ಲೈಂಗಿಕ ಕಿರುಕುಳವೇ ತನ್ನ ಪತ್ನಿ ಸರಸ್ವತಿ ಸಾವಿಗೆ ಕಾರಣವೆಂದು ಸುಭಾಸ ಲಮಾಣಿ ದೂರಿನಲ್ಲಿ ತಿಳಿಸಿದ್ದಾರೆ.
ಸುಭಾಸ ಲಮಾಣಿ ನೀಡಿದ ದೂರನ್ನು ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಜುನಾಥ, ದೀಪಕ ಮತ್ತು ಚಂದ್ರಶೇಖರ ಎಂಬ ಮೂವರ ಮೇಲೆ ಸುಭಾಸ ಲಮಾಣಿ ದೂರು ನೀಡಿದ್ದಾರೆ.
ಈ ಪ್ರಕರಣ ಮುಂಡಗೋಡ ತಾಲೂಕಿನ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
*****
