ನಾಳೆ ದಿ.12ರಂದು ಮುಂಡಗೋಡ ಕ.ಸಾ.ಪ. ಸಭೆ

Spread the love

ಮುಂಡಗೋಡ : ದಿ.17, 18ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ನಾಳೆ ದಿ.12ರಂದು ಸಾಯಂಕಾಲ 5ಗಂಟೆಗೆ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಡಗೋಡ ಘಟಕದ ಸಭೆಯನ್ನು ಕರೆಯಲಾಗಿದ್ದು, ಕ.ಸಾ.ಪ. ಸದಸ್ಯರು ತಪ್ಪದೇ ಹಾಜರಾಗಿ ತಮ್ಮ ಅಮೂಲ್ಯ ಸಲಹೆ ಸೂಚನೆ ನೀಡಬೇಕು ಎಂದು ತಾಲೂಕಾ ಕ.ಸಾಪ. ಗೌರವ ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ್ ವಿನಂತಿಸಿದ್ದಾರೆ.

**********

ದಿ. 12 ರಂದು ಮುಂಡಗೋಡ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆ

ಮುಂಡಗೋಡ : ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು ದಿ.12, ಸೋಮವಾರ ಮುಂಜಾನೆ 10ಗಂಟೆಗೆ ಬಸವೇಶ್ವರ ದೇವಸ್ಥಾನ, ಬಸವಬೀದಿ, ಮುಂಡಗೋಡದಲ್ಲಿ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರಾದ ರವೀಂದ್ರ ನಾಯ್ಕ ತಿಳಿಸಿದ್ದಾರೆ.