ಮುಂಡಗೋಡ : ತಾಲೂಕಿನ ಮಳಗಿಯ ಮಾರಿಕಾಂಬಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಸಾಲಗಾಂವದ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದವರು ಲಿಂಗತ್ವಾಧಾರಿತ ದೌರ್ಜನ್ಯ ವಿಮೋಚನ ಅಭಿಯಾನ ಅಂಗವಾಗಿ ಸ್ವಸಹಾಯ ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ಪುಂಡಲೀಕ ಸಿರಸಿಕರ್, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರಾದ ರಾಘವೇಂದ್ರ ಹರಿಯಾಳ, ವಲಯ ಮೇಲ್ವಿಚಾರಕರಾದ ಶ್ಯಾಮಲಾ ನಾಯ್ಕ, ಎಕೊ ಕೇರ್ ಶಿರಸಿ, ಎಂ.ಬಿ.ಕೆ.ಯವರಾದ ಲತಾ ಕುರ್ಲಿ ಮತ್ತು ರತ್ನಾ ನಾರ್ವೇಕರ್ ಎಲ್.ಸಿ.ಆರ್.ಪಿ.ಯವರು, ಕೃಷಿಸಖಿ ಪಶುಸಖಿಯವರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ಪುಂಡಲೀಕ ಶಿರಸಿಕರ ಅವರು ಲಿಂಗತ್ವ ದೌರ್ಜನ್ಯದ ಕುರಿತು ಮಾಹಿತಿ ನೀಡಿದರು.