ಮುಂಡಗೋಡ: ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಅಡಕೆ ಹಾಗೂ ತೆಂಗಿನ ಮರಗಳಿಗೆ ಹಾನಿಯಾದ ಘಟನೆ ತಾಲೂಕಿನ ತಟ್ಟಿಹಳ್ಳ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಪ್ರವೀಣ ಹುಲಗೂರ ಎಂಬ ರೈತನ ಗದ್ದೆಯಲ್ಲಿನ ಅಡಕೆ ಹಾಗೂ ತೆಂಗಿನ ಮರಗಳು ಬೆಂಕಿಗಾಹುತಿಯಾಗಿವೆ. ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಅಡಕೆ ತೆಂಗಿನ ಸಸಿಗಳು ಸುಟ್ಟುಹೋಗಿವೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ಆರಿಸಿದರು. ಈ ಬೆಂಕಿ ಅನಾಹುತದಿಂದ ಸುಮಾರು ಒಂದು ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಸಪ್ನೀಲ್ ಪೇಡ್ನಕರ್ ಸಿಬ್ಬಂದಿಗಳಾದರ ಅಡಿವೆಪ್ಪ ಕುರುವಿನಕೋಪ್ಪ, ಹರೀಶ ಪಟಗಾರ, ಚಮನಸಾಬನ ನಧಾಪ್, ರಾಹುಲ ಜಿದ್ಧಿಮನಿ, ಮತ್ತು ಅರುಣಕುಮಾರ ಕಾರ್ಯಾಚರಣೆಯಲ್ಲಿದ್ದರು.