![](https://rajnewsline.com/wp-content/uploads/2023/04/IMG_20230424_095058.jpg)
ವರದಿ : ಮಂಜುನಾಥ ನಡಗೇರಿ
ಮುಂಡಗೋಡ : ಬಾಳೆ ಮತ್ತು ಅಡಿಕೆ ತೋಟದಲ್ಲಿ ಕಳೆ ತೆಗೆಯುವಾಗ ವಿಷ ಸರ್ಪ ಕಚ್ಚಿದ ಪರಿಣಾಮವಾಗಿ ರೈತನೊಬ್ಬ ಮೃತಪಟ್ಟ ಘಟನೆಯೊಂದು ಇಂದೂರ ಗ್ರಾಮದಲ್ಲಿ ಸಂಭವಿಸಿದೆ.
ಮಹಮ್ಮದ ಅಲಿ ಬಾಷಾಸಾಬ ಸೈಯದ್ ಅಲಿ(64) ಮೃತಪಟ್ಟ ರೈತನಾಗಿದ್ದಾನೆ.
ಘಟನೆ ವಿವರ : ಮಹಮ್ಮದ ಅಲಿ ಬಾಳೆ ಮತ್ತು ಅಡಿಕೆ ತೋಟದಲ್ಲಿ ಕಳೆ ತೆಗೆಯುವ ಕೆಲಸ ಮಾಡುತ್ತಿರುವಾಗ ವಿಷ ಸರ್ಪ ಕಚ್ಚಿತು. ಆಗ ಅವರನ್ನು ಬಸಾಪುರದಲ್ಲಿ ನಾಟಿ ಔಷಧಿ ಕೊಡಿಸಲಾಯಿತು. ಹಾವು ಕಚ್ಚಿದ ಗಾಯ ಮತ್ತೆ ಉಲ್ಬಣವಾದಾಗ ಅವರನ್ನು ರವಿವಾರ ಹುಬ್ಬಳ್ಳಿ ಕಿಮ್ಸ್ ಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮಹ್ಮದ ಅಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.