ಮತಗಟ್ಟೆ ಸ್ಥಾಪಿಸದಿದ್ದರೆ ಮತದಾನ ಬಹಿಷ್ಕರಿಸಲು ಆಲಳ್ಳಿ ಗ್ರಾಮಸ್ಥರ ನಿರ್ಧಾರ..!

Spread the love

ಮುಂಡಗೋಡ : ಹೊಸದಾಗಿ ನಮ್ಮ ಗ್ರಾಮಕ್ಕೆ ಮತಗಟ್ಟೆ ಮಾಡದಿದ್ದರೆ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಮತದಾನ ಮಾಡುವುದಿಲ್ಲ. ಮತದಾನ ಬಹಿಷ್ಕರಿಸುತ್ತೇವೆ ಎಂದು ತಾಲೂಕಿನ ಆಲಳ್ಳಿ ಗ್ರಾಮದ ಜನರು ತಿಳಿಸಿದ್ದಾರೆ.

ಆಲಳ್ಳಿ ಗ್ರಾಮದಲ್ಲಿ ಮತಗಟ್ಟೆ ಮಾಡುವ ಬಗ್ಗೆ ಕಳೆದ ವರ್ಷ ಸೆಪ್ಟೆಂಬರ್ 20ರಂದು ನಾವು ತಹಶೀಲದಾರರಿಗೆ ಮನವಿ ಸಲ್ಲಿಸಿದ್ದೇವೆ

ನಾವು ಆಲಳ್ಳಿ ಗ್ರಾಮಸ್ಥರು ಮುಡಸಾಲಿ ಗ್ರಾಮಕ್ಕೆ ಹೋಗಿ ಮತದಾನ ಮಾಡಬೇಕಾಗುತ್ತದೆ.  

ಆಲಳ್ಳಿ ಗ್ರಾಮಕ್ಕೆ ಹೊಸದಾಗಿ ಮತಗಟ್ಟೆಯನ್ನು ಸ್ಥಾಪಿಸಿದರೆ 350 ರಿಂದ 400 ಮತಗಳನ್ನು ಹೊಂದಿರುವ ನಮ್ಮ ಗ್ರಾಮದ ಜನರಿಗೆ ಒಳ್ಳೆಯದಾಗುತ್ತದೆ.

ಆಲಳ್ಳಿ ಗ್ರಾಮದಿಂದ ಮುಡಸಾಲಿ ಗ್ರಾಮ 6 km ದೂರದಲ್ಲಿರುತ್ತದೆ. ಬಸ್ಸಿನ ವ್ಯವಸ್ಥೆ ಸಹ ಇರುವುದಿಲ್ಲ. ಒಂದು ವೇಳೆ ಮತಗಟ್ಟೆಯನ್ನು ಮಾಡದಿದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಆಲಳ್ಳಿ ಗ್ರಾಮದ ಹಲವಾರು ಜನರು ತಿಳಿಸಿದ್ದಾರೆ.

**********