ಶಿಕ್ಷಕಿಯ ಮಾಂಗಲ್ಯಸರ ಕಳ್ಳತನ : ಇಬ್ಬರು ಅಂತರ ಜಿಲ್ಲಾ ಕಳ್ಳರ ಬಂಧನ

Spread the love

ಮುಂಡಗೋಡ : ಸರ್ಕಾರಿ ಶಾಸಕರ ಮಾದರಿ ಶಾಲೆಯ ಶಿಕ್ಷಕಿಯ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ಸರಗಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸವಣೂರಿನ ಅಫ್ಜಲ್ ಗವಾರಿ ಹಾಗೂ ದಾದಾಪೀರ್ ಮಿರ್ಜಿ ಬಂಧಿತ ಕಳ್ಳರಾಗಿದ್ದಾರೆ.

ಘಟನೆ ವಿವರ : ಕಳೆದ ದಿ.15ರಂದು ಸರ್ಕಾರಿ ಶಾಸಕರ ಮಾದರಿ ಶಾಲಾ ಶಿಕ್ಷಕಿ ಸರೋಜಾ ಬೈಂದೂರ್ ಅವರು ಶಾಲೆಯಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಹೊಸ ಓಣಿಯ ವಸಂತ ಕೊಣಸಾಲಿ ಅವರ ಮನೆ ಹತ್ತಿರ ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು ಶಿಕ್ಷಕಿಯ ಕೊರಳಲ್ಲಿದ್ದ 85,000 ಮೌಲ್ಯದ 22 ಗ್ರಾಂ. ತೂಕದ ಬಂಗಾರದ ತಾಳಿಸರವನ್ನು ಕಿತ್ತುಕೊಂಡು ಬೈಕ್ ಮೇಲೆ ಪರಾರಿಯಾಗಿದ್ದರು. ಬಗ್ಗೆ ಶಿಕ್ಷಕಿ ಸರೋಜಾ ದೂರು ದಾಖಲಿಸಿದ್ದರು.

ಪ್ರಕರಣವನ್ನು ಭೇದಿಸಲು ಎಸ್.ಪಿ. ಡಾ. ವಿಷ್ಣುವರ್ಧನ್, ಎಡಿಶನಲ್ ಎಸ್.ಪಿ. ಎಸ್.ಟಿ ಜಯಕುಮಾರ, ಶಿರಸಿ ಡಿ.ಎಸ್ಪಿ. ಗಣೇಶ ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಸಿ.ಪಿ.. ಸಿದ್ದಪ್ಪ ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೊಂಡು, ಪತ್ತೆಯ ಕಾರ್ಯದಲ್ಲಿ ಇದ್ದಾಗ, ಸುಮಾರು 22 ಗ್ರಾಂ. ಬಂಗಾರದ ತಾಳಸರವನ್ನು ಕಿತ್ತುಕೊಂಡು ಹೋದ ಆರೋಪಿತರಾದ ಸವಣೂರಿನ ಅಪ್ಪಲ್ತಂದೆ ಖಾದರಗೌಡ ಗವಾರಿ ಮತ್ತು ದಾದಾಪೀರ್ ಖಲಂದರ ತಂದೆ ಮಹ್ಮದಹನೀಫ್ ಮಿರ್ಜಿ ಇವರನ್ನು ಇಂದು ಬೆಳಗಿನ ಜಾವ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಿ, ಆರೋಪಿತರಿಂದ 22 ಗ್ರಾಂ. ಬಂಗಾರದ ತಾಳಸರ ಹಾಗೂ ಕೃತ್ಯಗೆ ಬಳಸಿದ ಮೋಟಾರ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ

ಪ್ರಕರಣವನ್ನು ಭೇದಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿ.ಪಿ.. ಸಿದ್ದಪ್ಪ ಎಸ್. ಸಿಮಾನಿ, ಪಿ.ಎಸ್.. ಯಲ್ಲಾಲಿಂಗ ಕುನ್ನೂರಪಿ.ಎಸ್.. ಹನಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಸಲೀಮ್, ಗಣಪತಿ ಹುನ್ನಳ್ಳಿ, ಅನ್ವರಖಾನ್, ಬಸವರಾಜ್ ಲಮಾಣಿ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ, ಕೊಟೇಶ ನಾಗರವಳ್ಳಿ, ಮಹಾಂತೇಶ ಮುಧೋಳ, ಮುಂಡಗೋಡ ಪೊಲೀಸ್ ಠಾಣೆ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರುಗಳಿಗೆ ಪೊಲೀಸ್ ಅಧೀಕ್ಷಕರು ಕಾರವಾರ ರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.