![](https://rajnewsline.com/wp-content/uploads/2021/07/H10-mundgod-036.jpg)
ಮುಂಡಗೋಡ : ತಾಲೂಕಿನ ಹನುಮಾಪುರ ಅರಣ್ಯದಲ್ಲಿ ಚಿರತೆಯೊಂದು ಆಕಳ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಕಳೆದ ರಾತ್ರಿ ನಡೆದಿದೆ.
ನಾಗನೂರ ಗ್ರಾಮದ ಅಶೋಕ ಫಕ್ಕೀರಪ್ಪ ಹಾನಗಲ್ ಇವರ ಆಕಳು ಹನುಮಾಪುರ ಅರಣ್ಯಕ್ಕೆ ಹೋದ ವೇಳೆಯಲ್ಲಿ ಚಿರತೆ ದಾಳಿ ಮಾಡಿದ್ದು ಸ್ಥಳದಲ್ಲೇ ಆಕಳು ಮೃತಪಟ್ಟಿದೆ. ರಾತ್ರಿ ವೇಳೆಯಲ್ಲಿ ಅರಣ್ಯ ರಸ್ತೆಯಲ್ಲಿ ಅಡ್ಡಾಡದಂತೆ, ಅರಣ್ಯಕ್ಕೆ ಹೋಗದಂತೆ ಹನುಮಾಪುರ, ನಾಗನೂರ ಗ್ರಾಮಸ್ಥರಿಗೆ ಕಾತೂರ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ.