ಮುಂಡಗೋಡ : ನಿಮ್ಮ ಋಣ ನನ್ನ ಮೇಲಿದೆ. ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ ದಿನಸಿ ಕಿಟ್‍ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಇಂದು ಹೇಳಿದರು.
ಅವರು ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಹೆಬ್ಬಾರ ರೇಶನ ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಯಾವದೇ ಜಾತಿ ಮತ, ಪಕ್ಷ ಬೇಧ ಭಾವವಿಲ್ಲದೇ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೂ ಕಿಟ್‍ಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಎಲ್. ಟಿ.ಪಾಟೀಲ್ , ರವಿ ಗೌಡ ಪಾಟೀಲ್, ಮುಖಂಡರಾದ ಜ್ಞಾನದೇವ ಗುಡಿಯಾಳ, ಗುಡ್ಡಪ್ಪಾ ಕಾತೂರ, ದೇವು ಪಾಟೀಲ, ಸಿದ್ದಪ್ಪ ಹಡಪದ, ತುಕಾರಾಮ ಇಂಗಳೆ, ಇಮ್ತಿಯಾಜ ನಾಕೆವಾಲೆ, ಕೆಂಜೊಡಿ ಗಲಬಿ ಮುಂತಾದವರಿದ್ದರು.