ಮುಂಡಗೋಡ: ರೈತನೊಬ್ಬ ಬೆಳೆ ಬೆಳೆಯಲು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಸಾಧ್ಯವಾಗದೆ ಬೇಸರದಲ್ಲಿದ್ದ ರೈತ ಮದ್ಯ ಕುಡಿದ ನಶೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಜರುಗಿದೆ.
ಮುಡಸಾಲಿ ಗ್ರಾಮದ ಪ್ರಭು ತಿಪ್ಪಣ್ಣ ಬೆಡಸಗಾಂವ(50) ಎಂಬವನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತ ಎರಡುಲಕ್ಷ ಐವತ್ತುಸಾವಿರಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದು ಈ ವಿಷಯದಲ್ಲಿ ಬೇಸರಗೊಂಡಿದ್ದವನು. ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಶನಿವಾರ ಮದ್ಯ ಕುಡಿದ ನಶೆಯಲ್ಲಿದ್ದಾಗ ಯಾವುದೊ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದನು. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಈತ ಸಾವನ್ನಪ್ಪಿದ್ದು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.