ಹನಿಗವನಗಳು

Spread the love

ಕೆಲಸ

ಆಶ್ವಾಸನೆಗಳ

ಕೊಡೋದಷ್ಟೇ ಅಲ್ಲ,

ರಾಜಕಾರಣಿಗಳ ಕೆಲಸ,

ಕೊಟ್ಟ ಆಶ್ವಾಸನೆಗಳ

ಮರೆಯುವುದೂ ಅವರದೇ ಕೆಲಸ!

    * * * * *

ಕಟ್ಟೋಣ

ಕಟ್ಟುವುದು ಬೇಡ ಅಲ್ಲಿ

ಮಸೀದಿ ಮಂದಿರ,

ಕಟ್ಟೋಣ ನಾವಿಲ್ಲಿ

ಮನೋಮಂದಿರ,

ಆದೀತು ಆಗ  ಈ

ಜಗ  ಸುಂದರ.

~ ಶಿವಪ್ರಸಾದ ಹಾದಿಮನಿ, ಕೊಪ್ಪಳ