ನವೋದಯ ವಿದ್ಯಾಲಯದ ಶಿಕ್ಷಕ ಫಕ್ಕೀರಪ್ಪ ಅವರಿಗೆ ಡಾ.ಎ.ಪಿ.ಜೆ. ಅಬ್ದುಲ ಕಲಾಂ ಪ್ರಶಸ್ತಿ

Spread the love

ಮುಂಡಗೋಡ : ಜವಾಹರ್ ನವೋದಯ ವಿದ್ಯಾಲಯ ಪಂಚವಟಿ, ಮಳಗಿಯ ಸಂಗೀತ ಶಿಕ್ಷಕರಾದ ಫಕೀರಪ್ಪ ಮಾದನಬಾವಿ ಅವರು ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ ಕಲಾಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆಗೆ ಧಾರವಾಡ ನ್ಯೂಸ್ ಸಮೂಹ ಸಂಸ್ಥೆಗಳಿಂದ ಕೊಡ ಮಾಡುವ ಭಾರತರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಕರ್ನಾಟಕ ಸುವರ್ಣ ಮಹೋತ್ಸವದ ವರ್ಷ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಡಿಸೆಂಬರ್ 30ರಂದು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನ ಧಾರವಾಡದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಲಾಗಿದೆ.

ಶಿಕ್ಷಕ ಫಕೀರಪ್ಪ ಮಾದನಬಾವಿ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಜವಾಹರ್ ನವೋದಯ ವಿದ್ಯಾಲಯದ ಪಿ.ಟಿ.ಸಿ. ಅಧ್ಯಕ್ಷರಾದ ಪ್ರಕಾಶ ಅಜ್ಜಮ್ಮನವರ್ ಹಾಗೂ ಸದಸ್ಯರು, ಪ್ರಿನ್ಸಿಪಾಲರಾದ ಅಶೋಕನ್, ಉಪ ಪ್ರಿನ್ಸಿಪಾಲರಾದ ಮೇರಿ ಥಾಮಸ್, ಕೆ.ಸಿ.ಹುಬ್ಬಳ್ಳಿ, ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

(ಜವಾಹರ್ ನವೋದಯ ವಿದ್ಯಾಲಯದ ಪಿ.ಟಿ.ಸಿ. ಅಧ್ಯಕ್ಷರಾದ ಪ್ರಕಾಶ ಅಜ್ಜಮ್ಮನವರ್)
ಶಿಕ್ಷಕರಾದ ಫಕೀರಪ್ಪ ಮಾದನಬಾವಿಯವರು ಇನ್ನು ಹೆಚ್ಚಿನ ಸೇವೆ ಸಲ್ಲಿಸಿ ನಮ್ಮ ವಿದ್ಯಾಲಯಕ್ಕೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ತರಲಿ ಎಂದು ಪಿ.ಟಿ.ಸಿ. ಅಧ್ಯಕ್ಷರಾದ ಪ್ರಕಾಶ ಅಜ್ಜಮ್ಮನವರ್ ಶುಭ ಹಾರೈಸಿದ್ದಾರೆ.