ಶಿಂಗನಳ್ಳಿಯಲ್ಲಿ ಮನೆ ಕುಸಿದು ಹಾನಿ

Spread the love

ಮುಂಡಗೋಡ : ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಂಗನಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆ ಬುಧವಾರ ರಾತ್ರಿ ಜರುಗಿದೆ.

   ಶಿಂಗನಳ್ಳಿ ಗ್ರಾಮದ ರವಿ ಸಹದೇವಪ್ಪ ಪಾಟೀಲ ಎಂಬವರ ಮನೆಯೆ ಮಳೆಗೆ ಕುಸಿದು ಬಿದ್ದಿದೆ. ಕಳೆದ 3-4 ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿದ ಕಾರಣ ಈ ಮನೆ ಕುಸಿದು ಬಿದ್ದಿದೆ. ತುಂಬಾ ಹಳೆಯ ಮನೆಯಾಗಿದ್ದ ಕಾರಣ ನಿರಂತರ ಮಳೆಗೆ ಕುಸಿದು ಬಿದ್ದಿದೆ ಎನ್ನಲಾಗಿದೆ.