ಮುಂಡಗೋಡ : ತಾಲೂಕಿನ ಮಳಗಿ ಗ್ರಾಮದಲ್ಲಿನ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ನ ಬಾಗಿಲು ಮುರಿದು 53ಸಾವಿರ ರೂ. ಕಳ್ಳತನ ಮಾಡಿಕೊಂಡು ಹೋದ ಘಟನೆ ಗುರುವಾರ ರಾತ್ರಿ ಜರುಗಿದೆ.
ಮಳಗಿ ಪೋಲಿಸ್ ಠಾಣೆಯಿಂದ ನೂರು ಮೀಟರ್ ಅಂತರದಲ್ಲಿರುವ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಇದ್ದು ಬ್ಯಾಂಕ್ ನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಬ್ಬಿಣದ ಕಪಾಟಿನಲ್ಲಿ ದ್ದ 53ಸಾವಿರ ರೂ. ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸ್ಥಳಕ್ಕೆ ಭೇಟಿ ನೀಡಿರುವ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.