ಗೋಡಂಬಿ ಉದ್ಯಮಿಯೊಬ್ಬರ ಬಳಿ 25ಲಕ್ಷರೂ. ಇದ್ದ ಬ್ಯಾಗ್ ಕಸಿದು ನಾಪತ್ತೆಯಾದ ಇಬ್ಬರು ಅಪರಿಚಿತರು

Spread the love

ಮುಂಡಗೋಡ : ಗೋಡಂಬಿ ಉದ್ಯಮಿಯೊಬ್ಬರು ಗೋಡಂಬಿ ಬೀಜ ಖರೀದಿಗಾಗಿ ಮುಂಡಗೋಡ ತಾಲೂಕಿನ ಮಳಗಿಗೆ ಬಂದ ವೇಳೆಯಲ್ಲಿ ಜಲಾಶಯದ ಹತ್ತಿರ ಇಬ್ಬರು ಅಪರಿಚಿತರು ಉದ್ಯಮಿ ಕೈಯಲ್ಲಿದ್ದ ಬ್ಯಾಗ್ ಕಸಿದು ನಾಪತ್ತೆಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಚಿಕ್ಕೋಡಿಯ ಗೋಡಂಬಿ ಉದ್ಯಮ ಶಿವನಗೌಡ ಪಾಟೀಲ ಹಾಗೂ ಅವನ ಸ್ನೇಹಿತ ಅಸ್ಲಾಂ ನದಾಫ ಇಬ್ಬರು ಸೇರಿ ಗೋಡಂಬಿ ಬೀಜ ಖರೀದಿಗೆ ತಾಲೂಕಿನ ಮಳಗಿಯ ಧರ್ಮಾ ಜಲಾಶಯದ ಹತ್ತಿರ ಬಂದಾಗ ಇಬ್ಬರು  ಅಪರಿಚಿತರು ಅವರನ್ನು ಮಾತನಾಡಿಸಿದ್ದಾರೆ. ನಂತರ ಅವರು ಮುಂದಕ್ಕೆ ಹೋಗುತ್ತಿದ್ದಂತೆ ಇಬ್ಬರು ಅಪರಿಚಿತರು ಉದ್ಯಮಿ ಶಿವನಗೌಡ ಅವರ ಕೈಯಲ್ಲಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತೀವ್ರ ತನಿಖೆ ಕೈಗೊಂಡಿದ್ದಾರೆ.

ಗೋಡಂಬಿ ಉದ್ಯಮಿ ಶಿವನಗೌಡ ಅವರ ಬ್ಯಾಗ್ ನಲ್ಲಿ 25 ಲಕ್ಷರೂ. ಇತ್ತೆಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಚಾರಣೆ ನಡೆದಿದೆ.