ಮುಂಡಗೋಡ : ಮುಂಡಗೋಡ. ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನಿಹದಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಬೀಕರವಾಗಿ ಕೊಲೆಯಾದ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ.
ಪಟ್ಟಣದ ಕಂಬಾರಗಟ್ಟಿಯ ನಿವಾಸಿ ವಿಜಯ ಈಳಿಗೇರ (25) ಎಂಬವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ವಿಜಯ ತನ್ನ ಕೆಎ 31ಇಬಿ7686 ಬೈಕ್ ಮೇಲೆ ಬಂದಿದ್ದು ಈ ವೇಳೆ ಯಾವುದೊ ವಿಷಯಕ್ಕೆ ಬೇರೆಯವರೊಂದಿಗೆ ಜಗಳ ಮಾಡಿಕೊಂಡಿದ್ದು ಈ ವೇಳೆ ಆರೋಪಿಗಳು ವಿಜಯನ ತಲೆಗೆ ಹೊಡೆದು ನಂತರ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ರಸ್ತೆ ಪಕ್ಕದ ಚರಂಡಿಯಲ್ಲಿ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ವಾಕಿಂಗ್ ಹೋಗುವವರು ಕೊಲೆಯಾಗಿ ಬಿದ್ದಿರುವುದನ್ನು ಕಂಡು ಪೊಲೀಸ್ ರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.