![](https://rajnewsline.com/wp-content/uploads/2021/07/IMG_20210719_1241181.jpg)
ಮುಂಡಗೋಡ : ಸನವಳ್ಳಿ ಗ್ರಾಮದ ಸರವೆ ನಂ.51ರಲ್ಲಿ ನಿವೇಶನ ಹಕ್ಕುಪತ್ರ ಮಂಜೂರಿ ಆದ ಸರಕಾರಿ ಜಮೀನನ್ನು ಒತ್ತುವರಿ ಮಾಡಿದವರನ್ನು ಖುಲ್ಲಾ ಪಡಿಸಲು ಒತ್ತಾಯಿಸಿ ಸನವಳ್ಳಿ ಗ್ರಾಮದ ನಿವೇಶನ ಮೂಂಜೂರುದಾರರು ಮತ್ತು ಗ್ರಾಮಸ್ಥರು ಇಂದು ಮುಂಡಗೋಡ ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ದಿ.26ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ದಿ.26ರಂದು ಅನಿರ್ದಿಷ್ಟ ಕಾಲದವರೆಗೆ ತಹಶೀಲದಾರ ಮುಂಡಗೋಡ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸುರೇಶ ಕೆರಿಹೊಲದವರ್, ದಿನೇಶ ಕೆರಿಹೊಲದವರ್, ಮಾದೇವಪ್ಪ ಕ್ಯಾಮನಕೇರಿ, ಸಮಪತಕುಮಾರ ಕ್ಯಾಮನಕೇರಿ, ಧರ್ಮು ಅರಶಿಣಗೇರಿ, ಪ್ರಭು ಅರಶಿಣಗೇರಿ, ಪರಶುರಾಮ ಹರಿಜನ, ಶಿವರಾಜ ಮಟ್ಟಿಮನಿ ಮುಂತಾದವರಿದ್ದರು.