ಗೋಕರ್ಣ ಪರ್ತಗಾಳಿ ಶ್ರೀಗಳು ವಿಧಿವಶ

Spread the love

ಕಾರವಾರ : ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ಇಂದು ವಿಧಿವಶರಾಗಿದ್ದಾರೆ.

ಅಗಸ್ಟ 3,1945ರಲ್ಲಿ ಜನಿಸಿದ ಶ್ರೀಗಳು 26 ಫೆಬ್ರವರಿ 1967ರಲ್ಲಿ ಶ್ರೀಗೋಕರ್ಣ ಪರ್ತಗಾಳಿ ಮಠದ 23ನೇ ಮಠಾಧಿಪತಿಗಳಾಗಿ ಆಶ್ರಮ ಸ್ವೀಕರಿಸಿದ್ದರು.

ಸಮಾಜದ ಒಳಿತಿಗಾಗಿ,ಸನಾತನ ಹಿಂದು ಧರ್ಮದ ರಕ್ಷಣೆ ಹಾಗೂ ಯುವ ಪೀಳಿಗೆಯಲ್ಲಿ ಹಿಂದೂ ಧರ್ಮದ ಜಾಗೃತೆಗಾಗಿ ಹಲವಾರು ದಶಕಗಳ ಕಾಲ ಶ್ರಮಿಸಿದ ಪೂಜ್ಯರು ಜಾತಿ, ಧರ್ಮ, ಮತ ಭೇದ ಮಾಡದೇ ನೊಂದು ಬಂದ ಭಕ್ತಾದಿಗಳ ಸಂಕಷ್ಟಗಳನ್ನು ಪರಿಹರಿಸುತ್ತಿದ್ದರು ಶ್ರೀಗಳ ಅಗಲಿಕೆಯಿಂದಾಗಿ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ.