‘KSRTC’ ನಿವೃತ್ತ, ಮಾಜಿ ನೌಕರರಿಗೆ ಗುಡ್ ನ್ಯೂಸ್ : ಶೇ.15 ರಷ್ಟು ವೇತನ ಹೆಚ್ಚಳದ ಬಾಕಿ ಹಣ ವಿತರಣೆ : ರಾಮಲಿಂಗಾರೆಡ್ಡಿ

Spread the love

ಬೆಂಗಳೂರು : ಜನೆವರಿ 2024 ರಿಂದ ಮೂಲ ವೇತನ ಹೆಚ್ಚಳ ಹಾಗೂ ಜನೆವರಿ 2020 ರಿಂದ ಫೆಬ್ರವರಿ 28 2023 ರವರೆಗಿನ ಬಾಕಿ ಹಣ, ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರಹೋಗಿರುವ ಅಂದಾಜು 10,000 ನೌಕರರಿಗೂ ಶೇಕಡಾ 15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ. ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ.

ಶಾಂತಿನಗರದಲ್ಲಿರುವ ಕೆಎಸ್‌ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಹಾಗೂ ಕೆಎಸ್‌ಆರ್​ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್(ವಾಸು) ಉಪಸ್ಥಿತಿಯಲ್ಲಿ, ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕುಂದುಕೊರತೆಗಳ ಸಭೆ ನಡೆಯಿತು.

ಈ ವರ್ಷದ ಜನವೇರಿ ತಿಂಗಳದ ವೇತನ ಹೆಚ್ಚಳ ಕುರಿತಂತೆ ಮುಂದಿನ‌ ದಿನಗಳಲ್ಲಿ ಹೊಸ ಬಸ್​​ಗಳ ಸೇರ್ಪಡೆಯಾಗಿ ಆದಾಯ ವೃದ್ಧಿಸಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಕ್ರಮ ವಹಿಸಲಾಗುವುದು.ಇಂದು ಮೊದಲ ಸಭೆಯಾಗಿರುವುದರಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಮುಂದಿನ ಸಭೆಗಳಲ್ಲಿ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಮಾಡಿ ಮುಂದುವರಿಯೋಣ ಎಂದರು.

ಸಭೆಯ ಅಂತ್ಯದಲ್ಲಿ ಜನೆವರಿ 2020 ರಿಂದ ಫೆಬ್ರವರಿ 28 2023 ರವರೆಗಿನ ಬಾಕಿ ಹಣ, ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರಹೋಗಿರುವ ಅಂದಾಜು 10,000 ನೌಕರರಿಗೂ ಶೇಕಡಾ 15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ. ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದರು. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲು ಕೆಎಸ್‌ಆರ್​ಟಿಸಿ ವ್ಯವಸ್ಥಾಪಕ‌ ನಿರ್ದೇಶಕರಿಗೆ ಸೂಚಿಸಿದರು. ಈ‌ ಕ್ರಮಕ್ಕಾಗಿ ಎಲ್ಲ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದು ಸಾರಿಗೆ ಸಚಿವರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದ್ದಾರೆ.