ಪದಗ್ರಹಣ ಸಮಾರಂಭ

Spread the love

ಮುಂಡಗೋಡ : ಟ್ರಿನಿಟಿ ಹಾಲನಲ್ಲಿ ರೋಟರಿ ಕ್ಲಬ್ ಮುಂಡಗೋಡದ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ನೂತನ ಅಧ್ಯಕ್ಷರಾಗಿ ಶಾಜಿ ಥಾಮಸ್, ಕಾರ್ಯದರ್ಶಿಯಾಗಿ ಬೈಜು ವಿ.ಜೆ. ಹಾಗೂ ಖಜಾಂಚಿಯಾಗಿ ವಸಂತ ಕೊಣಸಾಲಿ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಸಮಾರಂಭವನ್ನು ಶಿರಸಿ ರೋಟರಿ ಕ್ಲಬ್ಬಿನ ಪ್ರವೀಣ ಕಾಮತ್ ನಡೆಸಿಕೊಟ್ಟರು. ನಂತರ ಅವರು ಮಾತನಾಡುತ್ತಾ, ರೋಟರಿ ಅಂದರೆ ಸೇವೆ. ಸೇವೆ ಮತ್ತೊಂದು ಹೆಸರು ರೋಟರಿ ಎಂದರು. ಶಿರಸಿ ವಲಯದ ರೋಟರಿ ಉಪ ಪ್ರಾಂತಪಾಲರಾದ ಡಾ.ಕೆ.ವಿ.ಶಿವರಾಮ ಉಪಸ್ಥಿತರಿದ್ದರು.

ರೋಟರಿ ಕ್ಲಬ್ಬಿನ ನಿತನ ಅಧ್ಯಕ್ಷರಾದ ಶಾಜಿ ಥಾಮಸ್ ಮಾತನಾಡಿ, ಬರುವ ದಿನಗಳಲ್ಲಿ ಸಾರವಜನಿಕರ ಸಹಕಾರದಿಂದ ರೋಟರಿ ಕ್ಲಬ್ಬಿನಿಂದ ಅನೇಕ ಯೋಜನೆಗಳನ್ನು ಸಮುದಾಯಕ್ಕೆ ನೀಡಲಾಗುವುದು ಎಂದರು.

ಆರಂಭದಲ್ಲಿ ಚೇತನ ಕಲಾಲ ಸ್ವಾಗತಿಸಿದರು. ಕಾರ್ಯದರ್ಶಿ ಬೈಜು ವಂದಿಸಿದರು.