ನೆರೆ, ತುರ್ತು ಕಾರ್ಯಾಚರಣೆಗೆ ಸನ್ನದ್ಧರಾಗುವಂತೆ ಸಚಿವ ಹೆಬ್ಬಾರ್ ಸೂಚನೆ.

Spread the love

ಮುಂಡಗೋಡ : ನೆರೆ ಹಾಗೂ ತುರ್ತು ಕಾರ್ಯಾಚರಣೆಗೆ ಸನ್ನದ್ಧರಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಗಳಿಗೆ ಸೂಚನೆ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ವರ್ಷಧಾರೆಯಿಂದ ಅನೇಕ ಕಡೆಗಳಲ್ಲಿ ಸಮಸ್ಯೆಗಳು ಉದ್ಬವಿಸಿದ್ದು ಯಾವುದೇ ಅವಘಡಗಳು ಸಂಭವಿಸದಂತೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸನ್ನದ್ದರಾಗಿದ್ದು ಪರಿಹಾರ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮೌಕಿಕ ಆದೇಶ ನೀಡಿದ್ದಾರೆ.

ನೆರೆ ಅಥವಾ ತುರ್ತು ಕಾರ್ಯಾಚರಣೆಗಾಗಿ ಅಧಿಕಾರಿಗಳು ಸನ್ನದ್ದರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಹಾಗು ಸಾರ್ವಜನಿಕರು ಸಹ ಸುರಿಯುತ್ತಿರುವ ಭಾರಿ ಮಳೆಯಲ್ಲಿ ಸಮಸ್ಯೆಗೆ ಸಿಲುಕದಂತೆ ಎಚ್ಚರಿಕೆವಹಿಸುವಂತೆ ಸಚಿವರು ವಿನಂತಿಸಿದ್ದಾರೆ.