
ಶಿರಸಿ : ದಿ.15ರಂದು ಸುರಿದ ಭಾರೀ ಮಳೆಯಿಂದ ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಮತ್ತು ರಾಗಿಹೊಸಳ್ಳಿ ಮಧ್ಯೆ ಭೂಕುಸಿತವಾಗಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದೆ.

ರಸ್ತೆಯ ಮೇಲೆ ಬಿದ್ದಿರುವ ಮಣ್ಣು ಹಾಗೂ ಮರಗಿಡಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ನಾಳೆಯವರೆಗೂ ಸಹ ಕಾರ್ಯಾಚರಣೆಯನ್ನು ಮುಂದುವರಿಸಬೇಕಾಗಿರುತ್ತದೆ. ಕಾರಣ ಸಾರ್ವಜನಿಕರು,
- ಶಿರಸಿ-ಯಲ್ಲಾಪುರ ಮಾರ್ಗವಾಗಿ ಕುಮಟಾ- ಅಂಕೋಲಾ-ಕಾರವಾರಕ್ಕೆ ಸಂಚರಿಸಬೇಕು.
- ಶಿರಸಿ-ಶಿವಳ್ಳಿ-ಹೆಗಡೆಕಟ್ಟಾ-ಯಾಣ ಮಾರ್ಗವಾಗಿ ಕುಮಟಾ-ಅಂಕೋಲಾ-ಕಾರವಾರಕ್ಕೆ ಸಂಚರಿಸಬೇಕು.
- ಶಿರಸಿಯಿಂದ ಸಿದ್ದಾಪುರ ಮಾರ್ಗವಾಗಿ ಕುಮಟಾ ಬಡಾಳ ಮಾರ್ಗವಾಗಿ ಸಂಚರಿಸುವಂತೆ ಶಿರಸಿ ಉಪವಿಭಾಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
