![](https://rajnewsline.com/wp-content/uploads/2024/07/img_20240717_1855353590441585028668688-1024x591.jpg)
ಶಿರಸಿ : ಕಳೆದ ದಿನ 15 ಮತ್ತು 16ರಂದು ಸುರಿದ ಬಾರಿ ಮಳೆಯಿಂದ ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಮತ್ತು ರಾಗಿಹೊಸಳ್ಳಿಯ ಮಧ್ಯೆ ಭೂಕುಸಿತವಾಗಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಬಂದ್ ಆಗಿದ್ದು ರಸ್ತೆಯ ಮೇಲೆ ಬಿದ್ದಿರುವ ಮಣ್ಣು ಹಾಗೂ ಮರ ಗಿಡಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು ದಿ.18ರವರೆಗೂ ಸಹ ಈ ಕಾರ್ಯಚರಣೆಯನ್ನು ಮುಂದುವರಿಸುವುದು ಅವಶ್ಯಕವಾಗಿರುತ್ತದೆ ಎಂದು ಶಿರಸಿ ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://rajnewsline.com/wp-content/uploads/2024/07/img-20240712-wa0080188484603259931920-1024x1024.jpg)
ಕಾರಣ ಸಾರ್ವಜನಿಕರು ಪರ್ಯಾಯ ಮಾರ್ಗದ ಮೂಲಕ ಸಂಚಾರವನ್ನು ಕೈಗೊಳ್ಳಬಹುದಾಗಿದೆ.
ಶಿರಸಿ-ಯಲ್ಲಾಪುರ ಮಾರ್ಗವಾಗಿ ಕುಮಟಾ- ಅಂಕೋಲಾ-ಕಾರವಾರಕ್ಕೆ ಸಂಚರಿಸಬಹುದು, ಶಿರಸಿ-ಶಿವಳ್ಳಿ-ಹೆಗಡೆಕಟ್ಟಾ-ಯಾಣ ಮಾರ್ಗವಾಗಿ ಕುಮಟಾ-ಅಂಕೋಲಾ-ಕಾರವಾರಕ್ಕೆ ಸಂಚರಿಸಬಹುದು. ಶಿರಸಿಯಿಂದ ಸಿದ್ದಾಪುರ ಮಾರ್ಗವಾಗಿ ಕುಮಟಾ ಬಡಾಳ ಮಾರ್ಗವಾಗಿ ಸಂಚರಿಸಬಹುದು ಎಂದು ಶಿರಸಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.