ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ : ಗೊಂದಲದ ಹೇಳಿಕೆ, ಕಾಯಿದೆ ಅರಣ್ಯವಾಸಿಗಳ ಪರ – ರವೀಂದ್ರ ನಾಯ್ಕ

Spread the love

ಶಿರಸಿ : ಅರಣ್ಯ ಭೂಮಿ ಹಕ್ಕು ಕಾಯಿದೆಗೆ ತಿದ್ದುಪಡಿ ತರಬೇಕೆಂಬ ಇತ್ತೀಚಿನ ಹೇಳಿಕೆ ಮತ್ತು ವಿದಾನ ಮಂಡಲ ಸದನ ಇತ್ತೀಚಿಗೆ ತೆಗೆದುಕೊಂಡ ನಿರ್ಣಯಗಳು ಗೊಂದಲಕ್ಕೆ ಕಾರಣವಾಗಿದ್ದು, ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಭೂಮಿ ಹಕ್ಕಿನ ಕಾಯಿದೆಗೆ ತಿದ್ದುಪಡಿ ಅವಶ್ಯಕವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಕಾಯಿದೆ ಮತ್ತು ನಿಯಮಾವಳಿ ಜಾರಿಗೆ ಬಂದು 17-18 ವರ್ಷಗಳ ನಂತರ, ಜಿಲ್ಲೆಯಲ್ಲಿ ಈ ಕಾನೂನು ಅಡಿಯಲ್ಲಿ ಈ ಹಿಂದೆ ಸಾಗೂವಳಿ ಹಕ್ಕು ಪತ್ರ ನೀಡಿದ ನಂತರ ಈಗ ಕಾಯಿದೆ ತಿದ್ದುಪಡಿ ಕುರಿತು ಪ್ರಸ್ತಾಪವಾಗುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.
ಹಕ್ಕಿಗೆ ಸಂಬಂಧಿಸಿ ನಿರ್ದಿಷ್ಟ ದಾಖಲಾತಿ ಸಾಕ್ಷಗಳನ್ನು ಆಧರಿಸಲು ಒತ್ತಾಯಸತಕ್ಕದ್ದಲ್ಲ ಎಂದು ಕಾನೂನಿಗೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಜಾರಿಗೆ ತಂದು 12 ವರ್ಷಗಳಾದರೂ ಮತ್ತು ಅರಣ್ಯವಾಸಿಗಳ 3 ತಲೆಮಾರಿನ ವಯಕ್ತಿಕ ಅತಿಕ್ರಮಣದ ದಾಖಲೆಯನ್ನು ಮಂಜೂರಿಗೆ ಪರಿಗಣಿಸುವುದು ತಪ್ಪು. ಅತಿಕ್ರಮಣ ಪ್ರದೇಶ 3 ತಲೆಮಾರಿನ ಜನ ವಸತಿ ಪ್ರದೇಶ ಎಂಬ ದಾಖಲೆಯ ಆಧಾರದ ಮೇಲೆ ಹಕ್ಕು ಪತ್ರ ನೀಡಬಹುದೆಂದು ಕಳೆದ 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನಿರ್ದೇಶಿಸಿ ಮಂಜೂರಿಗಿರುವ ಕಾನೂನು ತೋಡಕುಗಳನ್ನ ನಿವಾರಿಸಾಗಿದೆ ಎಂದು ಅವರು ಕಾನೂನಾತ್ಮಕ ಅಂಶವನ್ನು ವಿಶ್ಲೇಷಿಸಿದರು.
ಅಧ್ಯಯನ ಅವಶ್ಯ :
ಅರಣ್ಯ ಭೂಮಿ ಹಕ್ಕಿಗೆ ಆಡಳಿತಾತ್ಮತ ಇಚ್ಚಾಶಕ್ತಿ ಹಾಗೂ ಅಧಿಕಾರಿಗಳನ್ನು ನಿಯಂತ್ರಿಸುವ ಆಳವಾದ ಕಾನೂನು ಅದ್ಯಯನ ಜನ ಪ್ರತಿನಿದಿಗಳಿಗೆ ಅವಶ್ಯ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.