ಕಾರವಾರದ ನೆರೆ ಪೀಡಿತ ಪ್ರದೇಶಗಳಿಗೆ ಸಿದ್ಧರಾಮಯ್ಯ ಭೇಟಿ

Spread the love

ಕಾರವಾರ : ತಾಲೂಕಿನ ಕದ್ರಾ ಮಲ್ಲಾಪುರ ಗ್ರಾಮಗಳಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸೋಮವಾರ ಭೇಟಿ ನೀಡಿ, ‌ಪ್ರವಾಹ ಸಂತ್ರಸ್ತರ ಅಳಲು ಆಲಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರಿಂದ ಪ್ರವಾಹ ಮಾಹಿತಿ ಪಡೆದರು.

ಕೆಪಿಸಿ ಜೊತೆ ಸಭೆ: ಕೆಪಿಸಿ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ, ದೇಶಪಾಂಡೆ ಸಭೆ ನಡೆಸಿದರು. ಆರ್.ವಿ.ದೇಶಪಾಂಡೆ ,ಮಾಜಿ ಶಾಸಕ ಸೈಲ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು.