ಶಾಲಾ ಶಿಕ್ಷಣದಲ್ಲಿ ನೀತಿ ನಾವೀನ್ಯತೆ ವೇಗಗೊಳಿಸಲು ಮಹತ್ವದ ಕ್ರಮ: ‘J-PAL South Asia’ದೊಂದಿಗೆ ಒಡಂಬಡಿಕೆ

Spread the love

ಬೆಂಗಳೂರು : ಬೆಂಗಳೂರು -ಕರ್ನಾಟಕ ಸರ್ಕಾರವು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ (J-PAL) ದಕ್ಷಿಣ ಏಷ್ಯಾ ದೊಂದಿಗೆ ಪಾಲುದಾರಿಕೆ ಹೊಂದಿದ್ದು, ವೈಜ್ಞಾನಿಕ ಸಂಶೋದನೆ ಮತ್ತು ದತ್ತಾಂಶದ ಮೂಲಕ ಶಾಲಾ ಶಿಕ್ಷಣದಲ್ಲಿನ ಕೆಲವು ಸವಾಲುಗಳನ್ನು ಪರಿಹರಿಸಲು “ಕಲಿಕೆ ಲ್ಯಾಬ್” ಅನ್ನು ಸ್ಥಾಪಿಸುತ್ತದೆ.
“ಕಲಿಕೆ ಲ್ಯಾಬ್ ಗಳು” ಜಾಗತಿಕ ಸಂಶೋಧನಾ ಒಳನೋಟಗಳ ಮೂಲಕ ಕರ್ನಾಟಕದ ಶಾಲಾ ಶಿಕ್ಷಣದ ನೀತಿಗಳನ್ನು ರೂಪಿಸಲು ಸಹಕರಿಸುತ್ತದೆ ಹಾಗೂ ಯಾದೃಚ್ಛಿಕ ಮೌಲ್ಯಮಾಪನಗಳ ಮೂಲಕ ಹೊಸ ಮತ್ತು ಅಸ್ತಿತ್ವದಲ್ಲಿರುವ ಶಾಲಾ ಶಿಕ್ಷಣ ಕಾರ್ಯಕ್ರಮಗಳ ವೈಜ್ಞಾನಿಕ ಮೌಲ್ಯಮಾಪನಗಳಿಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, J-PALSouth Asia ರವರ ತಾಂತ್ರಿಕ ಪರಿಣತಿಯನ್ನು ಬಳಿಸಿಕೊಂಡು ವಿದ್ಯಾಥಿಗಳ ಮೂಲಭೂತ ಕಲಿಕೆಯನ್ನು ಬಲಪಡಿಸಲು ಮತ್ತು ಕಲಿಕೆಯ ಅಂತರವನ್ನು ಸುಧಾರಿಸಲು ಪರಿಣಾಮಕಾರಿಯಾದ ಶಾಲಾ ಶಿಕ್ಷಣದ ಮಧ್ಯವರ್ತನೆಗಳನ್ನು ಗುರುತಿಸಿ, ಅಳವಡಿಸಿಕೊಳ್ಳಲು ಕಾರ್ಯಗತಗೊಳಿಸುತ್ತದೆ. ಈ ಪ್ರಯತ್ನವು ಪೂರ್ವಪ್ರಾಥಮಿಕ ಹಂತದಿಂದ 12ನೇ ತರಗತಿ ಮಕ್ಕಳವರೆಗೂ ಪ್ರಯೋಜನವನ್ನು ನೀಡುತ್ತದೆ.

ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ರಿತೇಶ್ ಕುಮಾರ್ ಸಿಂಗ್‌, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಇಟ್ಬಾಲ್ ಧಲಿವಾಲ್, ಗ್ಲೋಬಲ್ ಕಾರ್ಯನಿರ್ವಾಹಕ ಕಾರ್ಯನಿರ್ವಾಹಕ ನಿರ್ದೇಶಕ, J-PALSouth Asia ರವರ ಉಪಸ್ಥಿತಿಯಲ್ಲಿ ಕೆ.ಎನ್.ರಮೇಶ್, ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್‌ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಶೋಭಿನಿ ಮುಖರ್ಜಿ, ಕಾರ್ಯನಿರ್ವಾಹಕ ನಿರ್ದೇಶಕರು, J-PAL South Asia, ರವರು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಈ ವೇಳೆ ಮಾತನಾಡಿದಂತ ಸಚಿವ ಮಧು ಬಂಗಾರಪ್ಪ ಅವರು “ಸದೃಢವಾದ ಶಾಲಾ ಶಿಕ್ಷಣ ನೀತಿಗಳು ಸಮೃದ್ಧ ಸಮಾಜವನ್ನು ನಿರ್ಮಿಸಲು ಪ್ರಮುಖವಾಗಿವೆ. ನಮ್ಮ ಗುರಿ ತಲುಪಲು J-PAL South Asia ರವರ ಅನುಭವ ಮತ್ತು ಸಂಕೀರ್ಣ ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸುವ ಪರಿಣತಿಯು ಅವರನ್ನು ಮೌಲ್ಯಯುತ ಪಾಲುದಾರರನ್ನಾಗಿ ಮಾಡುತ್ತದೆ’ ಎಂದು ತಿಳಿಸಿದರು.

ಶೋಭಿನಿ ಮುಖರ್ಜಿ, ಕಾರ್ಯನಿರ್ವಾಹಕ ನಿರ್ದೇಶಕರು, J-PAL South Asia ರವರು, “ಮಕ್ಕಳನ್ನು ತರಗತಿಗಳಲ್ಲಿ ಸೇರಿಸುವುದು ಮಾತ್ರವಲ್ಲ ಶಿಕ್ಷಣ, ಅವರು ಕಲಿಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಅದಕ್ಕಾಗಿಯೇ ನಮ್ಮ ಮಕ್ಕಳು ಕಲಿಯಲು ಮತ್ತು ಯಶಸ್ವಿಯಾಗಲು ಸಹಾಯ ಮಾಡಲು ಸಾಬೀತಾದ ಪರಿಣಾಮಕಾರಿತ್ವದೊಂದಿಗೆ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇತರರು ಅನುಸರಿಸಲು, ಬಲವಾದ ಉದಾಹರಣೆ ದಾಖಲಿಸಿದೆ’ ಎಂದು ಹೇಳಿದರು.