ಸರಳತೆಗೆ ಹೆಸರಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಸೇವೆಯಿಂದ ನಿವೃತ್ತಿ

Spread the love

ಮುಂಡಗೋಡ : ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಮುಂಡಗೋಡದ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಅವರು ಶನಿವಾರ ಸರಕಾರಿ ಸೇವೆಯಿಂದ ವಯೋ ನಿವೃತ್ತಿಯಾಗಿದ್ದಾರೆ. 

34 ವರ್ಷಗಳ ಸರ್ಕಾರಿ ಸೇವೆ ನಿರಂತರವಾಗಿ ಸಾಗಲು ಹಲವರು ಸಲಹೆ ಹಾಗೂ ಸಹಕಾರ ನೀಡಿದ್ದಾರೆ. ಶೈಕ್ಷಣಿಕ ಆಡಳಿತದಲ್ಲಿ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತಮ್ಮನ್ನು ಬೆಳೆಸಿ, ಸಹಕಾರ ನೀಡಿದವರೆಲ್ಲರಿಗೂ ಜಕಣಾಚಾರಿ ಅವರು ಧನ್ಯವಾದ ಸಲ್ಲಿಸಿದ್ದಾರೆ.